ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೊಡ್ಡಮನಿ ಚಿಂತನಶೀಲರು: ತೋಂಟದ ಶ್ರೀ

Lingaraj Badiger
Updated On : 20 May 2013, 11:21 am

ಗದಗ: ರಾಮಕೃಷ್ಣ ದೊಡ್ಡಮನಿ ಅವರು ಒಬ್ಬ ಸಂವೇದನಾಶೀಲ ಮತ್ತು ಚಿಂತನಶೀಲ ಯುವಕರಾಗಿದ್ದಾರೆ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀ ಹೇಳಿದರು.
ಈಚೆಗೆ ಅವರು ಸ್ಥಳೀಯ ಜ. ತೋಂಟದಾರ್ಯ ಮಠಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಆಶೀರ್ವದಿಸಿ ಮಾತನಾಡಿದರು.
ದೊಡ್ಡಮನಿಯವರು ದಲಿತ ಸಂಘರ್ಷ ಸಮಿತಿ ಜತೆ ಅವರು ಕರಳು ಬಳ್ಳಿಯ ಸಂಬಂಧ ಹೊಂದಿದ್ದರೂ ಇತರ ಸಮಾಜಗಳಿಂದ ದೂರವಾಗಿಲ್ಲ. ಅವರು ನಮ್ಮ ಮುಂಡರಗಿ ಮಠದ ಬಸವ ಪುರಾಣ ಸಮಿತಿ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಇದಕ್ಕೆ ಸಾಕ್ಷಿ. ಅನೇಕ ಸಲ ದೊಡ್ಡಮನಿಯವರು ನಾಟಕಗಳಲ್ಲಿ ಕೃಷ್ಣನ ಪಾತ್ರ ಮಾಡಿದ್ದು, ಈಗ ನಿಜವಾದ ಕೃಷ್ಣನ ಕಾರ್ಯಸಾಧಿಸುವ ಮತ್ತು ಜನಮುಖಿ, ಜನವಾದಿ, ಜನಪರ ಕೆಲಸ ಮಾಡುವ ಹೊಣೆಗಾರಿಕೆ ಅವರ ಮೇಲಿದೆ. ಮುಂಡರಗಿಗೆ ಹೊಂದಿ ತುಂಗಭದ್ರಾ ನದಿಯಲ್ಲಿ ಎಷ್ಟೋ ವರ್ಷ ನೀರು ಹರಿದಿದೆ. ಆದರೆ, ಅದರ ಉಪಯೋಗ ಮುಂಡರಗಿಗೆ ಆಗಿಲ್ಲ. ಕರ್ನಾಟಕದ ಪಶ್ಚಿಮಘಟ್ಟ ಎನಿಸಿದ ಸಾಕಷ್ಟು ನಿಸರ್ಗ ಸಂಪತ್ತು ಹಾಗೂ ವೈವಿದ್ಯಮಯ ಜೀವ ಸಂಕುಲ ಹೊಂದಿದ ಕಪ್ಪತ್ತಗುಡ್ಡ ಈ ತಾಲೂಕಿನಲ್ಲಿದ್ದು ಅದರ ಫಲ ಮುಂಡರಗಿಗೆ ಮುಟ್ಟಿಲ್ಲ. ನೂತನ ಶಾಸಕರು ಕಪ್ಪತ್ತಗುಡ್ಡ ರಕ್ಷಿಸಬೇಕು. ಇಲ್ಲಿಯ ಫಲವತ್ತಾದ ಭೂಮಿ ಕೈಗಾರಿಕೆಗೆ ವಶವಾಗದಂತೆ ನೋಡಿಕೊಳ್ಳಬೇಕು ಎಂದರು.   ಈ ಸಂದರ್ಭದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ತಾಲೂಕಿನಲ್ಲಿ ಜಾತಿ ಸಂಘರ್ಷದ ಸಂದರ್ಭ ಬಂದಾಗಲೆಲ್ಲ ಶ್ರೀಗಳ ಮಾರ್ಗದರ್ಶನದಲ್ಲಿ ಅವುಗಳನ್ನು ಪರಿಹರಿಸಿದ್ದಾಗಿ ತಿಳಿಸಿದರು. ಅಲ್ಲದೆ ಬಸವ ಪುರಾಣ ಪ್ರವಚನಕ್ಕೆ ದಲಿತನಾದ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಶ್ರೀಗಳು ನನ್ನನ್ನು ಎಲ್ಲ ಸಮಾಜಕ್ಕೆ ಪರಿಚಯಿಸಿದರು. ಶ್ರೀಗಳ ಆಶಯದಂತೆ ತಾವು ಮುಂಡರಗಿ-ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಗಳ ಜನರ ಸೇವೆ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಜೋಶಿ ಹಾಗೂ ಜ. ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ. ಶಿವಾನಂದ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ದೊಡ್ಡಮನಿಯವರ ಅಭಿಮಾನಿಗಳು, ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement