ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಾಸ್ಟೆಲ್‌ಗೆ ಅರ್ಜಿ ಆಹ್ವಾನ

Lingaraj Badiger
Updated On : 20 May 2013, 11:21 am

ಗದಗ:  ಗದಗ ತಾಲೂಕು ವ್ಯಾಪ್ತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಾದ ಗದಗ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಮೆಟ್ರಿಕ್ ಪೂರ್ವ ಬಾಲಕರ (ಟಿಟಿ) ವಿದ್ಯಾರ್ಥಿ ನಿಲಯ, ಗದಗ, ಕದಡಿ, ಲಕ್ಕುಂಡಿ, ಹರ್ಲಾಪುರ, ಮುಳಗುಂದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ (ಪರಿವರ್ತಿತ), ಗದಗ ಹಾಗೂ ಅನುದಾನಿತ ವಿದ್ಯಾರ್ಥಿ ನಿಲಯಗಳಾದ ಗದಗನ ಕನಕದಾಸ ಪ್ರಸಾದ ನಿಲಯ, ಸದಾಶಿವಾನಂದ ವಿದ್ಯಾರ್ಥಿನಿಲಯ, ಗದಗನ ಸರ್ವೋದಯ ಪ್ರಸಾದ ನಿಲಯ, ಗದಗನ ಪುಟ್ಟರಾಜ ಕವಿ ಗವಾಯಿಗಳವರ ವಸತಿ ನಿಲಯ, ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ವಸತಿ ನಿಲಯ, ದೇವರಾಜ ಅರಸು ವಿದ್ಯಾರ್ಥಿ ನಿಲಯ, ಬಳಗಾನೂರದ ಚಿಕ್ಕೇನಕೊಪ್ಪ ಚನ್ನವೀರ ಶರಣರ ಪ್ರಸಾದ ನಿಲಯ, ಬೆಟಗೇರಿಯ ಶ್ರೀರಾಮ ನಿಲಯ, ಬೆಟಗೇರಿಯ ಬಾಸೆಲ್ ಮಿಶನ್ ಅನಾಥಾಲಯ ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಸಂಬಂಧಿಸಿದ ನಿಲಯದಲ್ಲಿ ಹಾಗೂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ರಿಷಬ್ ಪ್ಲಾಜಾ, 2ನೇ ಮಹಡಿ, ಪೊಲೀಸ್ ಅತಿಥಿ ಗೃಹದ ಎದುರಿಗೆ, ಕೆಇಬಿ ರಸ್ತೆ, ಮುಳಗುಂದ ನಾಕಾ, ಗದಗ ಇವರಲ್ಲಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement