ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಡ್ಡಿಬಂಡಿ ಓಡಿಸುವ ಸ್ಪರ್ಧೆ ಶ್ಲಾಘನೀಯ: ಶಿವಕುಮಾರ ಶ್ರೀ

Lingaraj Badiger
Updated On : 21 May 2013, 11:08 am

ಕನ್ನಡಪ್ರಭ ವಾತೆ, ಗದಗ, ಮೇ 20
ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇ ಜನರ ಮೂಲ ವೃತ್ತಿಯಾಗಿದೆ. ಇಂದಿನ ದಿನದಲ್ಲಿ ರೈತರಿಗಾಗಿ ಹಮ್ಮಿಕೊಂಡಿರುವ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ ಶ್ಲಾಘನೀಯವಾಗಿದೆ ಎಂದು ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಹೇಳಿದರು.
ಅವರು ಭಾನುವಾರ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಸೋಮೇಶ್ವರ ಗೆಳೆಯರ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಜೋಡೆತ್ತಿನ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯಾಂತ್ರಿಕ ಜೀವನದಲ್ಲಿ ಗ್ರಾಮೀಣ ಕಲೆ, ಸಂಸ್ಕೃತಿ, ಸಂಪ್ರದಾಯಗಳು ನಶಿಸುತ್ತಿವೆ. ಅವುಗಳನ್ನು ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಯುವಕರು ಇಂತಹ ಚಟುವಟಿಕೆ ಹೆಚ್ಚಾಗಿ ಹಮ್ಮಿಕೊಳ್ಳಬೇಕು. ರೈತರು ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು. ಜಾನುವಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲನೆ ಮಾಡಬೇಕು. ಹಿರಿಯರ ಕೃಷಿ ಪದ್ಧತಿ ರೂಢಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.
ಫಕೀರಯ್ಯ ಶ್ರೀಗಳು ಹಾಗೂ ಗಂಗಾಧರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿ ಎನ್. ಪ್ರಹ್ಲಾದರಾವ್, ಕೃಷಿ ನಿರ್ದೇಶಕ ಎ.ಡಿ. ಸವದತ್ತಿ, ಸಹಾಯಕ ಕೃಷಿ ಅಧಿಕಾರಿ ಎ.ಜಿ. ಪಲ್ಲೇದ, ಶಿವಪ್ಪ ನೇಗಲಿ, ವಿದ್ಯಾಧರ ದೊಡ್ಡಮನಿ, ವೀರಪ್ಪ ಪೂಜಾರ, ಮಲ್ಲಿಕಾರ್ಜುನ ಕಿತ್ತೂರ, ಮಂಜುನಾಥ ಬಾಚಲಾಪುರ, ವೀರಪ್ಪ ಶಿವಶಿಂಪರ ಮುಂತಾದವರು ಪಾಲ್ಗೊಂಡಿದ್ದರು. ಗ್ರಂಥಪಾಲಕ ಸುರೇಶ ಪತ್ತಾರ ನಿರೂಪಿಸಿ, ವಂದಿಸಿದರು.
ಗಡ್ಡಿ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ವಿಜೇತರು ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯ ಬಸವೇಶ್ವರ ಪ್ರಸನ್ನ (1716 ಫೀಟ್) ಪ್ರಥಮ, ಬಾಗಲಕೋಟೆ ಜಿಲ್ಲೆಯ ಚಿತ್ತಬಾನುಕೋಟೆಯ ಲಕ್ಷ್ಮೀದೇವಿ ಪ್ರಸನ್ನ (1628.9 ಫೀಟ್) ದ್ವಿತೀಯ ಸ್ಥಾನ, ಬಾಗಲಕೋಟೆಯ ಲಿಂಗಾನಂದ ಪ್ರಸನ್ನ (1600 ಫೀಟ್) ತೃತೀಯ, ಜಾಲಿಕಟ್ಟಿಯ ಲಕ್ಷ್ಮೀದೇವಿ ಪ್ರಸನ್ನ (1567.10 ಫೀಟ್) 4ನೇ ಬಹುಮಾನ, ಗದಗ ಜಿಲ್ಲೆಯ ರೋಣ ತಾಲೂಕಿನ ಹನುಮಂತಗೌಡ ಹವಳಪ್ಪನವರ (1527.5 ಫೀಟ್) 5ನೇ ಬಹುಮಾನ, ಕೋಟುಮಚಗಿಯ ಬಸವರಾಜ ಮ್ಯಾಗೇರಿ (1416.4 ಫೀಟ್) 6ನೇ ಬಹುಮಾನ, ಬಾಗಲಕೋಟೆಯ ಪಿ.ಬಿ. ಬಡ್ನಿಯ ದಿಗಂಬರೇಶ್ವರ ಪ್ರಸನ್ನ (1400 ಫೀಟ್) 7ನೇ ಬಹುಮಾನ, ಕೋಟುಮಚಗಿಯ ಶರಣಪ್ಪ ಕರಡಿ (1398.8 ಫೀಟ್) 8ನೇ ಬಹುಮಾನ, ಗದಗ ಜಿಲ್ಲೆಯ ಜಿಗಳೂರಿನ ತಿಪ್ಪಣ್ಣ ಬಸವಡೆಯರ (1385.7 ಫೀಟ್) 9ನೇ ಬಹುಮಾನ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement