ಸಾಮೂಹಿಕ ವಿವಾಹದಿಂದ ಶಾಂತಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 20
ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡು ಕೊಳ್ಳಬಹುದು. ಜತೆಗೆ ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ ಎಂದು ಮರಾಠಾ ಸಮಾಜ ಧರ್ಮಗುರು ಶಂಕರ್‌ಗಿರಿ ಗೋಸ್ವಾಮಿಮಠ ಹೇಳಿದರು.
ಅವರು ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಪಟ್ಟಣ ಶಿವಾಜಿಪೇಟೆಯ ಛತ್ರಪತಿ ಶಿವಾಜಿ ಸಮುದಾಯ ಮಂಟಪದಲ್ಲಿ ಸ್ಥಳೀಯ ಕ್ಷತ್ರೀಯ ಮರಾಠಾ ಪರಿಷತ್, ಮಾರುತಿ ತರುಣ ಸಂಘ, ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳ ಆಶ್ರಯದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮರಾಠಾ ಸಮಾಜ ಅಧ್ಯಕ್ಷ ರೇಣಪ್ಪ ಇಂಗಳೆ ಮಾತನಾಡಿ, ವೀರವಂಶಜರಾದ ಕ್ಷತ್ರೀಯ ಮರಾಠರು ಸಂಘಟಿತರಾಗಿ ಕೂಡಿ ಬಾಳುವ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗೆ ಎಲ್ಲರೂ ಪಣ ತೊಡಬೇಕು ಎಂದರು.
ಮಧ್ವಾಚಾರ್ಯ ಜೋಶಿ ಪುರೋಹಿತ್ ವಹಿಸಿದ್ದರು. ಮಾಜಿ ಸಂಸದ ಆರ್.ಎಸ್.ಪಾಟೀಲ, ವೀರಣ್ಣಾ ಸೊನ್ನದ, ಮೋಹನಸಾ ರಾಯಬಾಗಿ, ಆರ್.ವೈ. ನಿಂಬೋಜಿ, ಬಾಳಪ್ಪ ಪವಾರ, ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಶಿವಾಜಿ ಹಾಳಕೇರಿ, ಕಲ್ಲಪ್ಪ ರಾಮಜಿ, ಮಾರುತೇಶ್ವರ ಪವಾರ, ಬಲವಂತಪ್ಪ ಜಾಣಾಯಿ, ಪರಸಪ್ಪ ನಿಂಬೂಜಿ, ಗಣಪತರಾವ್ ಮೋಹಿತೆ, ಶ್ರೀಕಾಂತ ಅವಧೂತ, ಕೆ.ಎ. ಬಳಿಗಾರ, ಕೆ.ವೈ. ಕಲ್ಲಪ್ಪ ಕಾಸಾಯಿ, ಯಮನಪ್ಪ ಚಿಟಗಿ, ಮಾಧವ್‌ರಾವ್ ಚವ್ಹಾಣ ಇದ್ದರು. ಶಿವಾಜಿ ಪೇಟೆ ತುಂಬೆಲ್ಲಾ ಹಾಕಿದ್ದ ಹಸಿರು ತೋರಣ ಚಪ್ಪರ ಹಂದರ ಜನಮನ ಸೆಳೆಯಿತು.