ಸ್ವಾಭಿಮಾನ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ
ನರೇಗಲ್ಲ: ಸ್ಥಳೀಯ ಚನ್ನಬಸಮ್ಮ ಅಂದಾನಪ್ಪ ದಿಂಡೂರ ಪ್ರತಿಷ್ಠಾನದಿಂದ ಪ್ರಥಮ ಬಾರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ರೋಣ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಸರ್ವ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಆಸಕ್ತರು ತಮ್ಮ ಸ್ವ ಹಸ್ತಾಕ್ಷರದಲ್ಲಿ ಅರ್ಜಿ ಬರೆಯಬೇಕು. ಅರ್ಜಿಯೊಂದಿಗೆ ತಾವು ಪಡೆದ ಅಂಕಗಳ ದೃಢೀಕೃತ ಅಂಕಪಟ್ಟಿ ಹಾಗೂ ಇತ್ತೀಚಿನ 2 ಭಾವಚಿತ್ರಗಳನ್ನು ಅಂಟಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಜೂನ್ 5ರೊಳಗಾಗಿ ಮಲ್ಲಿಕಾರ್ಜುನ ದಿಂಡೂರ, ಮಂಜುನಾಥ ಕಿರಾಣಿ ಸ್ಟೋರ್ಸ್, ಬಸ್ ನಿಲ್ದಾಣದ ಎದುರಿಗೆ, ನರೇಗಲ್ಲ - ಈ ವಿಳಾಸಕ್ಕೆ ಸಲ್ಲಿಸಲು ಕೋರಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ತಲಾ 25 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಜೂ. 10ರಂದು ಬೆಳಗ್ಗೆ 11 ಗಂಟೆಗೆ ಗಂಟೆಗೆ ನರೇಗಲ್ಲಿನಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು. ಮಾಹಿತಿಗೆ ಮೊ. 9611632378, 888423680, 7406979466 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.