ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಜೇಂದ್ರಗಡ ಟಕ್ಕೆದ ಮಸೀದಿಯಲ್ಲಿ 25ರಂದು ಉರೂಸ್

Rashmi Kasaragodu
Updated On : 22 May 2013, 11:51 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 21
ಪಟ್ಟಣದ ಟಕ್ಕೆದ ಮಸೀದಿಯ ಹಜರತ್ ಸಯ್ಯದ ಮಾಸೂಮ ಅಲಿಷ್ಯಾ ಪೀರಾಂ ಹಾಗೂ ಹಜರತ್ ಸಯ್ಯದ ನಿಶಾರ ಅಲಿಷ್ಯಾ ಪೀರಾಂ (ಟೆಕ್ಕೆದ ಬಾಬಾ) ರವರ ಉರೂಸ್ ಮೇ 25ರಂದು ನಡೆಯಲಿದೆ.
ಐತಿಹಾಸಿಕ ಹಿನ್ನೆಲೆಯ ಟಕ್ಕೇದ ಬಾಬಾನವರ ಮಸೀದಿ ಸುಮಾರು 500 ವರ್ಷಗಳ ಪರಂಪರೆ ಹೊಂದಿದೆ. ಈ ದರ್ಗಾದಲ್ಲಿ ಹಜರತ್ ಸೈಯದ ಮಾಸೂಮ್ ಅಲಿಷ್ಯಾ ಪೀರಾಂ ಹಾಗೂ ಹಜರತ್ ನೀಶಾರ ಅಲಿಷ್ಯಾ ಪೀರಾಂ ಅವರು ಹಿಂದು ಮುಸ್ಲಿಂ ಸೌಹಾರ್ದದ ಕೊಂಡಿಯಾಗಿ, ನಿಸ್ವಾರ್ಥ ಸೂಫಿ ಸಂತರಾಗಿ ಧಾರ್ಮಿಕ ಚಿಂತನೆಯ ಹರಿಕಾರರಾಗಿ ಜನಜನಿತರಾದರು.
ಸೂಫಿ ಸಂತ ಹಜರತ್ ಸೈಯದ ನಿಶಾರ ಅಲಿಷ್ಯಾ ಪೀರಾಂ ಅವರಿಂದ 1965ರಲ್ಲಿ ಬಯ್ಯತ್ (ಗುರು ದೀಕ್ಷೆ) ಪಡೆದ ದರ್ಗಾದ ಈಗಿನ ಸೈಯದ್ 8ನೇ ಪೀಠಾಧಿಪತಿ ಹಜರತ್ ಸೈಯದ್ ಮೆಹಬೂಬ ಆಲಿಷ್ಯಾ ಪೀರಾಂ ಸಜ್ಜಾದೆ ನಸೀನರಾಗಿ ಭಕ್ತರ ಪ್ರೀತಿಯ ಟಕ್ಕೆದಬಾಬಾ, ಟಕ್ಕೆದ ಅಜ್ಜ, ಟಕ್ಕೆದ ನಾನಾ ಎಂದೆಲ್ಲ ಕರೆಸಿಕೊಳ್ಳುತ್ತಿದ್ದಾರೆ. ಮೂರು ದಶಕಗಳಿಂದ ಜಾತಿ ಮತ ಪಂಥ ಭೇದ ಎಣಿಸದೆ ಭಕ್ತರನ್ನು ಪ್ರೀತಿಯಿಂದ ಕಂಡು ಅವರ ನೋವು, ರೋಗ-ರುಜಿನಗಳನ್ನು ಮಂತ್ರಶಕ್ತಿಯಿಂದ ವಾಸಿ ಮಾಡಿದ್ದನ್ನು ಅರಿತು ಕೊಪ್ಪಳ, ಬಾಗಲಕೋಟೆ, ಬೀದರ್, ಗುಲಬರ್ಗಾ, ಬಿಜಾಪುರ ಜಿಲ್ಲೆಗಳು ಹಾಗೂ ಮಹಾರಾಷ್ಟ್ರದಿಂದಲೂ ಭಕ್ತಸಮೂಹ ಇಲ್ಲಿಗೆ ಹರಿದು ಬರುತ್ತಿದೆ.
ಉರೂಸ್, ದುರ್ಗಾದೇವಿ ಜಾತ್ರೆ: ಇಲ್ಲಿ ಪ್ರತಿವರ್ಷ ಬುದ್ಧ ಪೂರ್ಣಿಮೆ (ಆಗಿ ಹುಣ್ಣಿಮೆ)ಯಂದು ಉರೂಸ್ ನಡೆಯುತ್ತದೆ. ಮೇ 24ರಂದು ಸ್ಥಳೀಯ ಕೆಳಗಲ್ ಪೇಟೆಯ ತಟಗಾರ ಮಸೀದಿಯಿಂದ ಗಂಧ (ಸಂದಲ) ಆಚರಣೆ ಆರಂಭಗೊಂಡು 25ರಂದು ಸಂಜೆ ಕೆಳಗಲ್ ಪೇಟೆಯ ದುರ್ಗಾದೇವಿ ಜಾತ್ರೆಯ ಉಚ್ಚಾಯ ಎಳೆದ ನಂತರ ಉರೂಸಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅನ್ನ ಸಂತರ್ಪಣೆಯಂತಹ ಆಚರಣೆಗಳಿಗೆ ಚಾಲನೆ ನೀಡಲಾಗುತ್ತದೆ. ಕಾಕತಾಳಿಯ ಎಂಬಂತೆ ಶಿರಹಟ್ಟಿಯ ಫಕೀರೇಶ್ವರ ಜಾತ್ರಾ ಮಹೋತ್ಸವವೂ ಅಂದೇ ನಡೆಯುತ್ತಿರುವುದು ಭಾವೈಕ್ಯಕ್ಕೆ ಮಾದರಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement