ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನತೆಗೆ ತೊಂದರೆಯಾಗದಂತೆ ಪಡಿತರ ಚೀಟಿ ವಿತರಿಸಲು ಮನವಿ

Rashmi Kasaragodu
Updated On : 22 May 2013, 11:50 am

ಕನ್ನಡಪ್ರಭ ವಾರ್ತೆ, ಗದಗ, ಮೇ 21
ಗದಗ-ಬೆಟಗೇರಿ ಭಾಗದಲ್ಲಿರುವ ಜನತೆಗೆ ತೊಂದರೆಯಾಗದಂತೆ ಪಡಿತರ ಚೀಟಿಯನ್ನು ವಿತರಿಸಬೇಕೆಂದು ಆಗ್ರಹಿಸಿ ಈಚೆಗೆ ಶ್ರೀರಾಮ ಸೇನಾ ಕಾರ್ಯಕರ್ತರು ಗದಗ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ ಮಾತನಾಡಿ, ಗದಗ-ಬೇಟಗೇರಿ ಅವಳಿ ನಗರದಲ್ಲಿ ಸಾರ್ವಜನಿಕರಿಗೆ ಪಡಿತರ ಚೀಟಿ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಸಾರ್ವಜನಿಕರು ಎಸ್‌ಎಂಎಸ್ ಮತ್ತು ಹೆಬ್ಬೆಟ್ಟಿನ ಗುರುತು ಇವುಗಳನ್ನು ಸರ್ಕಾರವು ನಿಗದಿಪಡಿಸಿದ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಖಾಸಗಿ ಕೇಂದ್ರಗಳಲ್ಲಿಯೂ ಅನುಕೂಲ ಮಾಡಿಕೊಡಬೇಕು. ಇದರಿಂದ ಸಾರ್ವಜನಿಕರು ದಿನಗಟ್ಟಲೆ ಕಾಯುವುದು ತಪ್ಪಲಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚು ಕೇಂದ್ರಗಳನ್ನು ತೆರೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು. ಪಡಿತರ ಚೀಟಿಗಳನ್ನು ಪಡೆಯಲು ಈಗ ಇರುವ ಕಾನೂನಿನಲ್ಲಿ ಹಲವಾರು ದೋಷಗಳಿವೆ. ಅವುಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿ ಜಾರಿಗೆ ತಂದರೆ ಪಡಿತರ ಚೀಟಿಗಳು ಎಲ್ಲ ಅರ್ಹ ಫಲಾನುಭವಿಗಳಿಗೆ ದೊರೆಯುವಂತಾಗುವುದು. ಅಲ್ಲದೆ ಈಗ ಕೊಡುತ್ತಿರುವ ರೇಷನ್ ಸಹ ನಿಲ್ಲಿಸಬಾರದು. ಕೆಲವೊಂದು ಕಾರಣಗಳಿಂದ ಪಡಿತರ ಚೀಟಿದಾರರಿಗೆ ಹೆಬ್ಬೆಟ್ಟಿನ ಸಹಿ ಕೊಡುವುದು ಆಗದೇ ಇರುವುದು ಮತ್ತು ಅವರುಗಳಿಗೆ ಸಕಾಲಕ್ಕೆ ಎಸ್‌ಎಂಎಸ್ ತಲುಪದೇ ಇರುವುದರಿಂದ ವಿಳಂಭವಾಗಿರುತ್ತದೆ. ಕಾರಣ ಪಡಿತರ ಚೀಟಿದಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ತಹಸೀಲ್ದಾರ್ ಮಾತನಾಡಿ, ನಿಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ವೀರೂಪಾಕ್ಷಗೌಡ ಕೋಟಿಗೌಡ್ರ, ಅಶೋಕ ಮದ್ಲಾಪುರ, ಉಮೇಶ ಚಿಟ್ಟಿ, ಗುಡುಸಾಬ ಮುಳಗುಂದ, ರಂಗಪ್ಪ ದಹಿಂಡೆ, ಆರ್.ಪಿ. ಮುಲ್ಲಾ, ಪಿ.ವಿ. ಮಾನ್ವಿ, ನಾಗರತ್ನ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement