ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಡಿತರ ಚೀಟಿ: ಸಾರ್ವಜನಿಕರ ಗಮನಕ್ಕೆ

Rashmi Kasaragodu
Updated On : 22 May 2013, 11:50 am

ಗದಗ: ಜಿಲ್ಲೆಯಲ್ಲಿ 2010ಕ್ಕಿಂತ ಹಿಂದೆ ಖಾಸಗಿ ಸಂಸ್ಥೆಯವರು ನೀಡಿದ ಖಾಯಂ ಪಡಿತರ ಚೀಟಿಗಳಲ್ಲಿರುವ ಬೆರಳಚ್ಚು ಬಯೋವುಟ್ರಿಕ್ ದೋಷ ಪೂರಿತವಾಗಿದ್ದ ಕಾರಣ ಪಡಿತರ ಚೀಟಿದಾರರು ಮತ್ತೊಮ್ಮೆ ತಮ್ಮ ಕುಟುಂಬದ ಸದಸ್ಯರ ಭಾವಚಿತ್ರ ಮತ್ತು ಬಯೋವುಟ್ರಿಕ್ (ಬೆರಳಚ್ಚು ಗುರುತನ್ನು) ಪಡೆಯಬೇಕಾಗಿರುತ್ತದೆ ಎಂದು ಗದಗನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಶಿಧರ ಕುರೇರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಇಂತಹ ಪಡಿತರ ಚೀಟಿದಾರರು ಸಾಕಷ್ಟು ಸಂಖ್ಯೆಯಲ್ಲಿ ಇರುವುದಾಗಿ ಅಂದಾಜಿಸಲಾಗಿದೆ. ಈ ಪಡಿತರ ಚೀಟಿದಾರರ ಕುರಿತು ಇಲಾಖೆಯ ವೆಬ್‌ಸೈಟ್‌ನಲ್ಲಿ ಭಾವಚಿತ್ರ ಮತ್ತು ಬಯೋವುಟ್ರಿಕ್ ಪಡೆಯಲು ಅನುಕೂಲವಾಗುವಂತೆ ನಗರ, ಪಟ್ಟಣ ಪ್ರದೇಶದ ಕಾರ್ಡ್‌ದಾರರಾಗಿದ್ದಲ್ಲಿ ತಮ್ಮ ಅಥವಾ ಕುಟುಂಬ ಸದಸ್ಯರ ಅಥವಾ ಸ್ನೇಹಿತರ ಮೊಬೈಲ್‌ನಿಂದ ಖಈಖಊಃ ಪದ ಮತ್ತು ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ (ಉದಾ. ಖಈಖಊಃ  ಎಆಉ1505442) ಎಂದು ಟೈಪ್‌ಮಾಡಿ, ಮೊ. 9212357123 ಈ ನಂಬರ್‌ಗೆ ಎಸ್‌ಎಂಎಸ್ ಕಳುಹಿಸಿ. ಎಸ್‌ಎಂಎಸ್‌ಗೆ ನೊಂದಾವಣೆಯಾದ ನಂತರ ನಿಮ್ಮ ಮೊಬೈಲ್‌ಗೆ ಟೋಕನ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ ಒಳಗೊಂಡ ಎಸ್‌ಎಂಎಸ್ ಸಂದೇಶ ಬರುತ್ತದೆ (ಇದನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ) ಈ ರೀತಿ ಪಡಿತರ ಚೀಟಿದಾರರು ನೊಂದಾವಣೆ ಮಾಡಿಕೊಂಡಿರುವ ಬಗ್ಗೆ ಅವರ ಮೊಬೈಲ್ ಪೋನಿಗೆ ಬಂದಿರುವ ಎಸ್‌ಎಂಎಸ್ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಕಾರರಿಗೆ ತೋರಿಸಿ ಮೇ-2013ನೇ ತಿಂಗಳ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಕೋರಲಾಗಿದೆ. ಈ ರೀತಿ ಎಸ್‌ಎಂಎಸ್ ಕಳುಹಿಸಿ ನೋಂದಾವಣೆ ಮಾಡಿಕೊಂಡ ಪಡಿತರ ಚೀಟಿದಾರರಿಗೆ ಮಾತ್ರ ಪಡಿತರ ವಸ್ತುಗಳಾದ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ವಿತರಿಸಲಾಗುವುದು. ನೋಂದಾವಣೆ ಮಾಡಿಕೊಳ್ಳದ ಪಡಿತರ ಚೀಟಿದಾರರಿಗೆ ಪಡಿತರ ವಸ್ತುಗಳನ್ನು ವಿತರಿಸಲಾಗುವುದಿಲ್ಲ. ಎಸ್‌ಎಂಎಸ್ ಮೂಲಕ ಸೆಕ್ಯೂರಿಟಿ ಕೋಡ್ ಮತ್ತು ಪ್ರವೇಶ, ಟೋಕನ್ ಸಂಖ್ಯೆ ಪಡೆದ ಪಡಿತರ ಚೀಟಿದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ನಗರ, ಪಟ್ಟಣ ಪ್ರದೇಶದಲ್ಲಿ ಪ್ರಾರಂಭಿಸಿರುವ ಸೇವಾ ಕೇಂದ್ರಗಳಲ್ಲಿ ಭಾವಚಿತ್ರ ಮತ್ತು ಜೀವ ಮಾಪಕ ನೀಡತಕ್ಕದ್ದು. ಗ್ರಾಮೀಣ ಪ್ರದೇಶದವರು ಎಸ್‌ಎಂಎಸ್ ಸಂದೇಶವನ್ನು ಕಳುಹಿಸುವ ಅಗತ್ಯ ಇರುವುದಿಲ್ಲ.
ಕಾರ್ಡ್‌ದಾರರು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಹೋಗಿ ಭಾವಚಿತ್ರ ಹಾಗೂ ಬಯೋವುಟ್ರಿಕ್ ನೀಡುವುದು ಕಡ್ಡಾಯವಾಗಿರುತ್ತದೆ. ಅವರಿಂದ ಸೆಕ್ಯೂರಿಟಿ ಕೋಡ್ ಮತ್ತು ಪ್ರವೇಶ, ಟೋಕನ್ ಸಂಖ್ಯೆಯನ್ನು ಪಡೆದರೆ ಮಾತ್ರ ಮೇ-2013ನೇ ತಿಂಗಳ ಪಡಿತರ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ವಿತರಿಸಲಾಗುವುದು. ಒಂದು ವೇಳೆ ಸೆಕ್ಯುರಿಟಿ ಕೋಡ್ ಮತ್ತು ಪ್ರವೇಶ, ಟೋಕನ್ ಸಂಖ್ಯೆಯನ್ನು ಪಡೆದುಕೊಳ್ಳದೇ ಇರುವ ಪಡಿತರ ಚೀಟಿದಾರರಿಗೆ ಪಡಿತರ ವಸ್ತುಗಳನ್ನು ವಿತರಿಸಲಾಗುವುದಿಲ್ಲ. ಈ ಕೆಲಸಕ್ಕಾಗಿ ರು. 50 ಕಾರ್ಡ್‌ದಾರರು ಪಾವತಿ ಮಾಡುವಂತೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement