ಪರೀಕ್ಷಾರ್ಥಿಗಳಿಗೆ ಸೂಚನೆ
ಗದಗ: ಸ್ಥಳೀಯ ಡಾ. ಪಿಜಿಎಎಸ್ ಸಮಿತಿಯ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠಶಾಲೆಯ ವತಿಯಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ನಡೆಸಿದ ಅಕ್ಟೋಬರ್ 2012ನೇ ಸಾಲಿನ ವಿಶೇಷ ಸಂಗೀತ ವ, ತಾಳವಾದ್ಯ (ತಬಲಾ) ಪರೀಕ್ಷೆಗಳ ಫಲಿತಾಂಶಗಳು ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಸಂಗೀತ ಪರೀಕ್ಷೆಗಳ ಪ್ರಮಾಣ ಪತ್ರಗಳು ಬಂದಿರುತ್ತವೆ. ಮೇ. 29 ರೊಳಗಾಗಿ ಸಂಗೀತ ಪಾಠಶಾಲೆಯ ಕಾರ್ಯಾಲಯದ ವೇಳೆ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿಗಾಗಿ ಮೊ. 8123289985, 9880618841 ಇಲ್ಲಿಗೆ ಸಂಪರ್ಕಿಸುವಂತೆ ಪಾಠಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.