ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಜೀವ್ ಆದರ್ಶ ಮಾದರಿ: ಬ್ಯಾಳಿ

Rashmi Kasaragodu
Updated On : 22 May 2013, 11:50 am

ಕನ್ನಡಪ್ರಭ ವಾರ್ತೆ, ಗದಗ, ಮೇ 21
ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಯುವಕರಿಗಾಗಿ ಹಲವಾರು ಜನಪರ ಯೋಜನೆ ಕಾರ್ಯಗತಗೊಳಿಸಿದರು. ಅವರ ಆದರ್ಶಗಳು ಯುವಜನತೆಗೆ ಮಾದರಿ ಎಂದು ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಹೇಳಿದರು.
ಮಂಗಳವಾರ ಬೇಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ರಾಜೀವ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ರಾಜೀವ್ ಅವರಲ್ಲಿದ್ದ ದೇಶಪ್ರೇಮ, ರಾಜಕೀಯ ಕಳಕಳಿ ಹಾಗೂ ಸಾಧನೆ ಅಪಾರ. ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದರು ಎಂದು ಸ್ಮರಿಸಿದರು.
ಕಿರಿ ವಯಸ್ಸಿನಲ್ಲೇ ಪ್ರಧಾನಿ ಹುದ್ದೆ ಅಲಂಕರಿಸಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶ್ರಮಿಸಿದ ರಾಜೀವ್ ದೇಶ ಕಂಡ ವಿಶಿಷ್ಟ ರಾಜಕಾರಣಿ ಎಂದರು.
ಸಿ.ಎಂ. ಮಾರನಬಸರಿ ನಿರೂಪಿಸಿದರು, ಉಪನ್ಯಾಸಕ ಎ.ಎ. ಹದ್ಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement