ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

Rashmi Kasaragodu
Updated On : 22 May 2013, 11:50 am

ಗದಗ: ಬೆಟಗೇರಿಯ ಹುಯಿಲಗೋಳ ರಸ್ತೆಯಲ್ಲಿರುವ ಆದರ್ಶ ವಸತಿ ನಿಲಯಕ್ಕೆ ಪ್ರಸ್ತುತ ಸಾಲಿಗೆ 5ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂನ್ 1 ರಿಂದ ಪುನರಾರಂಭಗೊಳ್ಳಲಿರುವ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಕ್ಕಾಗಿ ಅರ್ಜಿಯನ್ನು ಶಾಲಾ ಮುಖ್ಯಸ್ಥರ ಸಹಿಯೊಂದಿಗೆ ಕಳೆದ ಸಾಲಿನ ಅಂಕಪಟ್ಟಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, 3 ಪಾಸ್‌ಪೋರ್ಟ್ ಸೈಜಿನ ಭಾವಚಿತ್ರಗಳೊಂದಿಗೆ ಮೇ 30 ರೊಳಗೆ ತಾಲೂಕಾ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಗದಗ ಇವರಿಗೆ ಸಲ್ಲಿಸಬೇಕು. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಕರ್ಯ ನೀಡಲಾಗುವುದು. ನುರಿತ ಹಾಗೂ ಅನುಭವಿಕ ಶಿಕ್ಷಕರಿಂದ ವಿಶೇಷ ವರ್ಗಗಳನ್ನು ನಡೆಸಲಾಗುವುದು. ಕಾರಣ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ನಿಲಯದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಯುಪಡೆಗೆ ನೇಮಕಾತಿ: ಆಹ್ವಾನ
ಗದಗ: ಭಾರತೀಯ ವಾಯು ಸೇನಾ ಪಡೆಯಲ್ಲಿ ಏರ್‌ಮನ್ ಟೆಕ್ನಿಕಲ್ ಹುದ್ದೆಗಳಿಗಾಗಿ ಆ. 13ರಂದು ನಡೆಸುವ ಪ್ರವೇಶ ಪರೀಕ್ಷೆಗಳಿಗಾಗಿ ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನ. ಪ್ರೆಸಿಡೆಂಟ್, ಸೆಂಟ್ರಲ್ ಏರ್‌ಮನ್ ಸೆಲೆಕ್ಷನ್ ಬೋರ್ಡ್, ಪೋಸ್ಟ್ ಬಾಕ್ಸ್ ನಂ. 11807, ನವದೆಹಲಿ-110 010- ಇಲ್ಲಿಗೆ ಕಳಿಸಬೇಕು. ಅರ್ಜಿದಾರರು ಸೆ. 1, 1993ರಿಂದ ಡಿ. 30, 1996ರೊಳಗೆ ಜನಿಸಿರಬೇಕು. ಹೆಚ್ಚಿನ ವಿವರಗಳನ್ನು ಢಿಢಿಢಿ.್ಝಟಿಜ್ಝಛಟಿಛ್ಝ್ಠಜ್ಟ್ಠ್ಛಿಜ.ಟ್ಝ್ಛಿ.್ಝಟಿ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಅಥವಾ ದೂ. 080-25592199 ಸಂಪರ್ಕಿಸಬಹುದು.
ಅಪಘಾತ: ಮಹಿಳೆ ಸಾವು
ಗದಗ: ಪ್ರಯಾಣಿಕರನ್ನು ಹೊತ್ತು ವೇಗವಾಗಿ ತೆರಳುತ್ತಿದ್ದ ಟಂಟಂ ಪಲ್ಟಿ ಹೊಡೆದ ಪರಿಣಾಮ ಅದರಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಗದಗ-ಕಳಸಾಪುರ ರಸ್ತೆಯ ಜೀರ ಕೆರೆಯ ಸಮೀಪ ಸಂಭವಿಸಿದೆ. ಮೃತರನ್ನು ತಾಲೂಕಿನ ಮಲ್ಲಸಮುದ್ರ ಗ್ರಾಮದ ಸುಶೀಲವ್ವ ಫಕ್ಕೀರಪ್ಪ ಹೂಗಾರ (40) ಎಂದು ಗುರುತಿಸಲಾಗಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಡಿದು ಸಾವು
ಗದಗ:  ಬಾಲಕನೋರ್ವ ರಾತ್ರಿ ವೇಳೆ ಹೊಲದಲ್ಲಿನ ಬೆಳೆಗೆ ನೀರು ಹಾಯಿಸಲು ಎಂದು ವಿದ್ಯುತ್ ಬರುವ ಸಮಯ ಕಾಯುತ್ತಾ ಕುಳಿತ ಸಂದರ್ಭದಲ್ಲಿ ಹಾವು ಕಡಿದು ಮೃತಪಟ್ಟಿರುವ ಘಟನೆ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ನಿವಾಸಿ ನಾಗರಾಜ ದೇವಪ್ಪ ಹಟ್ಟಿ (13) ಮೃತ ಬಾಲಕ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement