ಅಹವಾಲು ಸ್ವೀಕಾರ
ಗದಗ: ಕರ್ನಾಟಕ ಲೋಕಾಯುಕ್ತ ಗದಗ ಘಟಕದ ಅಧಿಕಾರಿ ಹಾಗೂ ಪ್ರಭಾರಿ ಆರಕ್ಷಕ ಉಪಾಧೀಕ್ಷ ಸಂಗನಗೌಡ ಅವರು ಗದಗ ಜಿಲ್ಲೆಯ ತಾಲೂಕುಗಳಿಗೆ ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ದೂರು, ಅರ್ಜಿ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಮೇ 24ರಂದು ಶಿರಹಟ್ಟಿ ಬೇಂದ್ರೆ ಭವನ, ಮೇ 25ರಂದು ಮುಂಡರಗಿ ತಾಪಂ ಸಭಾಭವನ, ಮೇ 27ರಂದು ರೋಣ ತಾಪಂ, ಮೇ 28ರಂದು ನರಗುಂದ ತಾಪಂದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಕುಂದುಕೊರತೆಗಳ ದೂರಿನ ಬಗ್ಗೆ ಅರ್ಜಿಗಳನ್ನು ಸ್ಥಳದಲ್ಲಿಯೇ ನೀಡಿ ಸದುಪಯೋಗ ಪಡೆಯಬೇಕೆಂದು ಗದಗ ಕರ್ನಾಟಕ ಲೋಕಾಯುಕ್ತ ಆರಕ್ಷಕ ಉಪಾಧೀಕ್ಷಕರು ತಿಳಿಸಿದ್ದಾರೆ.