ಎಚ್ಕೆ ಅಧಿಕಾರ ಸ್ವೀಕಾರ: ಹರ್ಷೋತ್ಸಾಹ
ಗದಗ: ಎಸ್.ಎಂ. ಕೃಷ್ಣಾ ನಗರದ ಒಂದನೇ ಕ್ರಾಸ್ನ ತಾಜದಾರ ಯಂಗ್ ಕಮಿಟಿ ಸದಸ್ಯರು ಹಾಗೂ ಪದಾಧಿಕಾರಿಗಳು ಗದಗ ಶಾಸಕ ಎಚ್.ಕೆ. ಪಾಟೀಲ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರಯುಕ್ತ ವಿಜಯೋತ್ಸವ ಆಚರಿಸಿ ಸಿಹಿ ವಿತರಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಸತ್ತಾರಸಾಬ ಡಂಕೇದ ಮಾತನಾಡಿ, ರಾಜಕಾರಣದಲ್ಲಿ ಕಳಂಕ ರಹಿತ ವ್ಯಕ್ತಿಗಳಾದ ಎಚ್.ಕೆ. ಪಾಟೀಲರಿಗೆ ಸೂಕ್ತವಾದ ಖಾತೆ ಲಭ್ಯವಾಗಿದೆ ಎಂದರು. ಇನ್ನೋರ್ವ ಕಾಂಗ್ರೆಸ್ ಧುರೀಣ ಗಣೇಶ ಕಲಬುರ್ಗಿ, ಮುಂತಾದವರು ಮಾತನಾಡಿದರು. ತಜದಾರ ಯಂಗ್ ಕಮಿಟಿ ಅಧ್ಯಕ್ಷ ಶಬ್ಬೀರ ಶಿರಹಟ್ಟಿ, ಸೋಮನಗೌಡ್ರ ಪಾಟೀಲ, ನಬೀಸಾಬ ವಾಲೀಕಾರ, ತಾಜುದ್ದೀನ ಕಳಸಾಪೂರ, ಕಾಶೀಂ ಧಾರವಾಡ, ನಜೀರಸಾಬ ತಳಕಲ್, ಮೆಹಬೂಬಸಾಬ ಮುಲ್ಲಾ, ಮೆಹಬೂಬಸಾಬ ಕಲೇಗಾರ, ಸಿರಾಜ ಜಮಾಲಖಾನವಾಲ, ಅಲ್ಫತ್ ಮನಿಯಾರ, ಸಲೀಂ ಮಲ್ಲಾನವರ, ಸಲೀಂ ಬೋದ್ಲೆಖಾನ ಮುಂತಾದವರು ಇದ್ದರು.