ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಡೊನೇಷನ್ ಹಾವಳಿ: ಸೂಕ್ತ ಕ್ರಮಕ್ಕೆ ಆಗ್ರಹ

Rashmi Kasaragodu
Updated On : 23 May 2013, 12:03 pm

ಗದಗ: ಎಲ್ಕೆಜಿಯಿಂದ ಪಿಜಿವರೆಗೆ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ-ಕಾಲೇಜುಗಳು ಕಾನೂನು ಬಾಹಿರವಾಗಿ, ಅಕ್ರಮವಾಗಿ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಡೊನೇಷನ್ ವಸೂಲಿ ತಡೆಯುವಂತೆ ಹಾಗೂ ಶಿಕ್ಷಣ ಅಧಿಕಾರಿಗಳ ನೇತೃತ್ವದ ಜಿಲ್ಲಾವಾರು ವಿಶೇಷ ತನಿಖಾದಳ ರಚಿಸಬೇಕೆಂದು ಮುಖ್ಯಮಂತ್ರಿಯವರಿಗೆ ಹಾಗೂ ಶಿಕ್ಷಣ ಮಂತ್ರಿಗಳಿಗೆ ವಿದ್ಯಾರ್ಥಿ ಜನತಾದಳ ಆಗ್ರಹಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳ ಪ್ರವೇಶ ಶುಲ್ಕ ನಿಗದಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಾಲಾ ಕಾಲೇಜುಗಳಿಗೆ ಸ್ಪಷ್ಟವಾದ ಸೂತ್ರವನ್ನು ನೀಡಿವೆ. ಅನುದಾನ ರಹಿತ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಉಪನ್ಯಾಸಕರಿಗೆ ಕೊಡುವ ಸಂಬಳಕ್ಕೆ ಅನುಸಾರವಾಗಿ ಶುಲ್ಕ ನಿಗದಿ ಮಾಡಬೇಕೆಂದು ನಿರ್ದೇಶನವಿದೆ. ಆದರೆ ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ ಇದನ್ನು ದುರುಪಯೋಗ ಪಡಿಸಿಕೊಂಡು ಹೆಚ್ಚಿನ ಡೊನೇಷನ್ ವಸೂಲಿ ಮಾಡುತ್ತಿರುವುದು ಜಿಲ್ಲಾ ವಿದ್ಯಾರ್ಥಿ ಜನತಾದಳ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಪ್ರಭುರಾಜಗೌಡ ಪಾಟೀಲ ತಿಳಿಸಿದ್ದಾರೆ.  ಯಾವುದೇ ಕಾಲೇಜುಗಳಿಗೆ ಡೊನೇಷನ್ ನೀಡಬಾರದು. ಇದರ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement