ದಿಂಡಿ ಮಹೋತ್ಸವ ಸಂಪನ್ನ
ಹಿರೇಕೆರೂರು: ಪಟ್ಟಣದ ಶ್ರೀ ವಿಠ್ಠಲ ರಖುಮಾಯಿ ದೇವಸ್ಥಾನದ ಆವರಣದಲ್ಲಿ ಕಳೆದ 3 ದಿನಗಳಿಂದ ಏರ್ಪಡಿಸಿದ್ದ ಶ್ರೀ ವಿಠ್ಠಲ ರಖುಮಾಯಿ 44ನೇ ವರ್ಷದ ದೇವರ ದಿಂಡಿ ಮಹೋತ್ಸವ ಭಾನುವಾರ ಶ್ರೀ ಜ್ಞಾನೇಶ್ವರಿ ಪಾರಾಯಣ ಹಾಗೂ ಪಂಡರಿನಾಥ ಕೀರ್ತನೆಯೊಂದಿಗೆ ದಿಂಡೀ ಮಹೋತ್ಸವ ಮಂಗಲವಾಯಿತು.
ಬೆಳಗ್ಗೆ ಶ್ರೀ ವಿಠ್ಠಲ ರಖುಮಾಯಿ ಮತ್ತು ಶಿವಗೋರಕ್ಷನಾಥ ದೇವತೆಗಳಿಗೆ ಪಂಚಾಮೃತ ಅಭಿಷೇಕ, ಕಾಲ ಕೀರ್ತನೆ, ಮಹಾ ಮಂಗಳಾರತಿ ಹಾಗೂ ಜ್ಞಾನೇಶ್ವರಿ ಪಾರಾಯಣದ ಪುಸ್ತಕ ಪಠಣದೊಂದಿಗೆ ಕಳೆದ ಮೂರು ದಿನಗಳಿಂದ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯಗೊಂಡವು. ಧರ್ಮದರ್ಶಿ ವೈ.ಡಿ. ಮಧೂರಕರ್ ಅಧ್ಯಕ್ಷತೆಯಲ್ಲಿ ಶಿವೂರಕರ ಮನುಕೃಷ್ಣ ಮಹಾರಾಜರು ಪಂಡರಿನಾಥನ ಕೀರ್ತನೆ ನಡೆಸಿಕೊಟ್ಟರು.
ಈ ಸಂದರ್ಭ ಧರ್ಮದರ್ಶಿ ಪಾರ್ವತಿಬಾಯಿ ಮಧೂರಕರ್, ಹನುಮಬಾಯಿ ಮಧೂರಕರ್, ಸಮಾಜದ ಮುಖಂಡರಾದ ಚಂದ್ರಣ್ಣ ಮಧೂರಕರ್, ಶಿವಣ್ಣ ಮಧೂರಕರ್, ಮನೋಹರ ವಾಸಮರ, ಖಂಡೋಬಾ ಕಾಡನಕೊಪ್ಪ, ನಾರಾಯಣರಾವ್ ಬೀಸೆ, ರಾಘವೇಂದ್ರ ಬಂದಿಷ್ಟೆ, ಹನುಮಂತಪ್ಪ ಭಂಡಾರಿ, ಸೋಮಣ್ಣ ಅಲ್ಲಾಪುರ, ಪರಸಪ್ಪ ಗೋರಿ, ಕೇದಾರಪ್ಪ ಕಾಸರ, ಮಂಜುನಾಥ ಆಡೂರ, ಮಾರುತಿ ಸಾಗರ, ರೇಣುಕಾಬಾಯಿ ಕಾಣಿಕೆ, ರೂಪಾಬಾಯಿ ರಾಕುಂಡೆ, ಮಹಾಬಲೇಶ್ವರ ರಾಕುಂಡೆ, ಪರಶುರಾಮ ಗುತ್ತಲ, ಪುಂಡಲಿಕ ಗುತ್ತಲ, ಸ್ಮೀತಾ ಮಧೂರಕರ್, ಚಂದನಾ ಪಾರ್ಶಿ, ಶ್ರೀಪದ್ಮಾ ಮಧೂರಕರ್, ಶಾಂತಾ ಮಧೂರಕರ್, ಪಾಂಡು ಕೊತವಾಲ, ಮೋಹನ್ ಕೊತವಾಲ್, ರಾಮಚಂದ್ರ ಮಧೂರಕರ್, ನಾಗಪ್ಪ ಹೊನ್ನತ್ತಿ, ದುರುಗಪ್ಪ ಕಬ್ಬೂರ, ಫಕ್ಕೀರಪ್ಪ ತಾಂದಳೆ ಮುಂತಾದವರು ಉಪಸ್ಥಿತರಿದ್ದರು.