ಗದಗ: ಎಚ್.ಕೆ. ಪಾಟೀಲ್ಗೆ ತೋಂಟದ ಶ್ರೀ ಆಶೀರ್ವಾದ
ಗದಗ: ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಗದುಗಿಗೆ ಆಗಮಿಸಿ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ ಎಚ್.ಕೆ. ಪಾಟೀಲರನ್ನು ಡಾ ತೋಂಟದ ಸಿದ್ಧಲಿಂಗ ಶ್ರೀಗಳು ಆಶೀರ್ವದಿಸಿದರು. ವಿವಾದರಹಿತ, ಒಳ್ಳೆಯ ರಾಜಕಾರಣಿ. ಯಾವುದೇ ಲಾಬಿ ಮಾಡದೆ ಯೋಗ್ಯತೆ ಮೇಲೆ ಮಂತ್ರಿಯಾಗಿರುವ ಕರ್ನಾಟಕದ ಬೆರಳಣಿಕೆಯ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು ಎಂದು ಶ್ರೀಗಳು ಪ್ರಶಂಸಿಸಿದರು. ಗ್ರಾಮೀಣ ಜನರಿಗೆ ಕುಡಿಯುವ ನೀರು, ರಸ್ತೆ ಮುಂತಾದ ಮೂಲಸೌಕರ್ಯಗಳು ಅಗತ್ಯವಿದ್ದು, ಎಚ್ಕೆ ಪಾಟೀಲರು ತಮ್ಮ ಅವಧಿಯಲ್ಲಿ ಇವುಗಳನ್ನು ಒದಗಿಸಲು ಯತ್ನಿಸಲಿ ಎಂದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಶೇಖಣ್ಣ ಬಡ್ನಿ, ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಬಾಲಚಂದ್ರ ಭರಮಗೌಡರ, ದಾನಪ್ಪ ತಡಸದ, ಎಂ.ಬಿ. ಬಡ್ನಿ, ಕೆ.ಎಸ್. ಚೆಟ್ಟಿ, ಬಸನಗೌಡ ಹಿರೇಗೌಡರ ಉಪಸ್ಥಿತರಿದ್ದರು.