ಬಸವ ತತ್ವ ಎಂದಿಗೂ ಪ್ರಸ್ತುತ: ಪಾವಟೆ
ಗದಗ: ಬಸವತತ್ವ ಎನ್ನುವುದು ಅತ್ಯಂತ ಪವಿತ್ರ ಹಾಗೂ ಎಂದೆಂದಿಗೂ ಪ್ರಸ್ತುತ ಎಂದು ಯುಷ್ಟನ್ ನಿವಾಸಿ ಬಸವರಾಜ ಪಾವಟೆ ಹೇಳಿದರು. ಅವರು ಈಚೆಗೆ ಅಮೆರಿಕ ದೇಶದ ಡಲ್ಲಾಸ್ ನಗರದಲ್ಲಿ ನಗರದ ವೀರಶೈವ-ಲಿಂಗಾಯತ ಸಮಾಜದ ಆಶ್ರಯದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದದರು. ಮೂಲತಃ ಗದುಗಿನವರಾದ ಮಂಗಳಾ ಕಾಮಣ್ಣವರ ಅನೇಕ ವಚನಗಳನ್ನು ಹಾಡಿ ಅವುಗಳ ತಾತ್ಪರ್ಯ ವಿವರಿಸಿದರು. ಅನುಪಮಾ ಬೆನಕಟ್ಟಿ ಮಾತನಾಡಿದರು. ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ದರಾಮಶಿವಯೋಗಿ, ನೀಲಾಂಬಿಕೆ, ಗಂಗಾಂಬಿಕೆ ಪಾತ್ರಗಳನ್ನು ಅಭಿನಯಿಸಿದ ಮಕ್ಕಳು ಗಮನ ಸೆಳೆದರು. ಡಲ್ಲಾಸ್ ನಗರದ ಹಿಂದೂ ಏಕತಾ ಮಂದಿರದಲ್ಲಿ ನಡೆದ ಈ ಬಸವ ಜಯಂತಿ ಕಾರ್ಯಕ್ರಮದ ಮೊದಲು ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಬಸವಂ ಪ್ರಣವಾಕಾರಂ ಪ್ರಾರ್ಥನೆಯೊಂದಿಗೆ ಪೂಜೆ ನಡೆಯಿತು. ರಕ್ಷಕ ಹಾಗೂ ಸಂಗಡಿಗರಿಂದ ಸಾಮೂಹಿಕ ಹಾಡು ಮತ್ತು ಮಂಗಳಾ ಕಾಮಣ್ಣವರ, ಸುಷ್ಮಾ ಹಿರೇಮಠ ಪ್ರಾರ್ಥನೆ ಗೀತೆಗಳನ್ನು ಹಾಡಿದರು. ಸವಿತಾ ಪ್ರದೀಪ ನಿರೂಪಿಸಿದರು. ಎಂ.ಎಸ್. ಬೀನಾ ವಂದಿಸಿದರು.
ನಾಳೆ ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ
ರೋಣ: ಗ್ರಾಮದೇವತೆ ಚೌಡೇಶ್ವರಿ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ಮೇ 25ರಂದು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ ಬಹುಮಾನವಾಗಿ ರು. 5001 ಹಾಗೂ ಟ್ರೋಫಿ, ದ್ವಿತೀಯ ರು. 3001 ಹಾಗೂ ಟ್ರೋಫಿ, ತೃತೀಯ ಬಹುಮಾನ ರು. 2001 ಹಾಗೂ ಟ್ರೋಫಿ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧವಿಲ್ಲ. ಎರಡು ಜನ ಒಂದು ತಂಡವಾಗಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ-9591851548, 7411402511, 7411575725ನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.