ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೆಟಗೇರಿ ಬಾಲಾಜಿ ಮಂದಿರಕ್ಕೆ ಎಚ್ಕೆ ಭೇಟಿ

Lingaraj Badiger
Updated On : 24 May 2013, 11:23 am

ಕನ್ನಡಪ್ರಭ ವಾರ್ತೆ, ಗದಗ, ಮೇ 23
ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಸರಳ ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು. ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.  
ಅವರು ಬುಧವಾರ ಬೆಟಗೇರಿಯ ರಜಪೂತ ಗಲ್ಲಿಯ ಶ್ರೀ ಬಾಲಾಜಿ ಮಂದಿರದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬಾಲಾಜಿ ದೇವರ ದರ್ಶನ ಪಡೆದು ನಂತರ ನೂತನ ವಧು-ವರರಿಗೆ ಶುಭಕೋರಿ ಮಾತನಾಡಿದರು.
ಜೀವನದಲ್ಲಿ ಸರಳತೆ ಅತಿ ಮುಖ್ಯವಾದುದು. ಅದನ್ನು ಬೆಳೆಸಿಕೊಂಡು ಬರಬೇಕು. ಆಡಂಬರಕ್ಕೆ ಹೆಚ್ಚು ಬೆಲೆ ಕೊಡದೇ ಸರಳತೆಗೆ ಮಹತ್ವ ಕೊಡಬೇಕು. ಹಿಂದಿನ ಇತಿಹಾಸ ಪುರುಷರ ಜೀವನವನ್ನು ಅವಲೋಕಿಸಿದಾಗ ಅವರು ಸರಳತೆಯಿಂದ ಬಾಳಿ ಇತರರಿಗೆ ಆದರ್ಶಪ್ರಾಯರಾಗಿದ್ದರು. ಅಂತವರ ಜೀವನದ ಆದರ್ಶನಗಳು ಇಂದಿನ ಯುವ ಪೀಳಿಗೆ ಕಲಿಯುವುದು ಅವಶ್ಯವಾಗಿದೆ ಎಂದರು. ಹೊಸ ಬಾಳಿನ ಹೊಸ್ತಿಲಲ್ಲಿ ಕಾಲಿಡುತ್ತಿರುವ ನೂತನ ದಂಪತಿಗಳು ತಮ್ಮ ಜೀವನದಲ್ಲಿ ಬರುವ ಸಿಹಿ-ಕಹಿ ಘಟನೆಗಳನ್ನು ಶಾಂತ ಚಿತ್ತದಿಂದ ಎದುರಿಸುವ ಆತ್ಮ ಸ್ಥೈರ್ಯ ಬೆಳೆಸಿಕೊಳ್ಳಬೇಕು. ನಿಮ್ಮ ತಂದೆ ತಾಯಿಗಳ ಮನಸ್ಸನ್ನು ನೋಯಿಸದೇ ಮತ್ತು ನೆರೆ ಹೊರೆಯವರ ಜತೆಗೆ ವಿಶ್ವಾಸದಿಂದ ಇದ್ದು ಜೀವನವನ್ನು ನಡೆಸುವಂತಹ ಗುಣಗಳನ್ನು ಬೆಳೆಸಿಕೊಳ್ಳಿ. ಅಂದಾಗ ಮಾತ್ರ ದಾಂಪತ್ಯ ಜೀವನವು ಸುಖಮಯವಾಗಲು ಸಾಧ್ಯವಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗದಗ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಗುರಣ್ಣಾ ಬಳಗಾನೂರ, ರಜಪೂತ ಸಮಾಜದ ಅಧ್ಯಕ್ಷ ಶಂಕರಸಿಂಗ್ ಬ್ಯಾಳಿ, ಆರ್.ಕೆ. ಜಮಾದಾರ, ಬಾಬುಸಿಂಗ್ ಬ್ಯಾಳಿ, ಶಿವಾಜಿಸಿಂಗ್ ಗಂಗಾವತಿ, ದುರ್ಗ್ಗಾಸಿಂಗ್ ಕಾಟೇವಾಲ, ಗಿರಿಧರಸಿಂಗ್ ಬ್ಯಾಳಿ, ಅರ್ಜುನಸಿಂಗ್ ಫುಲಾನೇಕರ, ಗಣೇಶಸಿಂಗ್ ಬ್ಯಾಳಿ, ವಿಕ್ರಮಸಿಂಗ್ ಜಮಾದಾರ, ವಿಷ್ಣು ಪಾಸ್ಥೆ, ಹನುಮಾಸಿಂಗ್ ಭಾವರೆ, ಗಣೇಶಸಿಂಗ್ ದೊಡ್ಡಮನಿ, ಸೂರಜಸಿಂಗ್ ಜಮಾದಾರ, ಗಣಪತಸಿಂಗ್ ತಾಳಿಕೋಟಿ, ಅವಿನಾಶಸಿಂಗ್ ಬ್ಯಾಳಿ, ಸುನೀಲಸಿಂಗ್ ಲದ್ದಿಗೇರಿ, ವಿಜಕುಮಾರಸಿಂಗ್ ಜಮಾದಾರ, ಈಶ್ವರಸಿಂಗ್ ಪಟಪಟೆ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement