ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಕ್ಷ್ಮೇಶ್ವರ ತಾಲೂಕಾಗಿಸಲು ಯತ್ನ: ಶಾಸಕ ದೊಡ್ಡಮನಿ

Mainashree
Updated On : 25 May 2013, 10:37 am

ಲಕ್ಷ್ಮೇಶ್ವರ: ಕಂದಾಯ ಸಚಿವ ಶ್ರೀನಿವಾಸ ಪ್ರಸಾದ ಅವರು ಹೊಸ ತಾಲೂಕು ರಚನೆ ಸಂಬಂಧ ನೀಡಿರುವ ಹೇಳಿಕೆ ಬಗ್ಗೆ ಯಾವುದೇ ವಿವಾದ ಬೇಡ. ಲಕ್ಷ್ಮೇಶ್ವರ ತಾಲೂಕು ರಚನೆಗೆ ಎಲ್ಲ ಸಹಕಾರ ನೀಡಲಾಗುವುದು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಶುಕ್ರವಾರ ಮಾಜಿ ಶಾಸಕ, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ತಾಲೂಕನ್ನಾಗಿ ಘೋಷಣೆ ಮಾಡಿದ್ದು, ತಾಲೂಕು ರಚನೆಯಲ್ಲಿ ನಾನು ಸರ್ಕಾರದೊಂದಿಗೆ ಚರ್ಚಿಸುತ್ತೇನೆ. ಲಕ್ಷ್ಮೇಶ್ವರ ತಾಲೂಕನ್ನಾಗಿಸಲು ನಾನು ಯಾವುದೇ ಹೋರಾಟಕ್ಕೆ ಸಿದ್ದ, ಇದರ ಬಗ್ಗೆ ಅನುಮಾನ ಬೇಡ ಎಂದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಇದರ ಬಗ್ಗೆ ಅನಾವಶ್ಯಕ ವಿವಾದ ಬೇಡ. ಸರ್ಕಾರ ತಾಲೂಕು ರಚನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದು ಮಾಡಿಲ್ಲ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ತಾಲೂಕುಗಳ ಅಧಿಕೃತ ಘೋಷಣೆ ಮಾಡುವುದಾಗಿ ಸಚಿವರು ಹೇಳಿದ್ದಾರೆ. ಸರ್ಕಾರ ಲಕ್ಷ್ಮೇಶ್ವರ ತಾಲೂಕನ್ನಾಗಿ ಅಧಿಕೃತ ಘೋಷಣೆ ಮಾಡುತ್ತದೆ. ಒಂದು ವೇಳೆ ಲಕ್ಷ್ಮೇಶ್ವರ ತಾಲೂಕಾಗದಿದ್ದರೆ ನಾವು ಎಲ್ಲ ರೀತಿಯ ಒತ್ತಡ ಹೇರಿ ತಾಲೂಕಾಗಿಸಲು ಶ್ರಮಿಸುತ್ತೇವೆ. ಇಲ್ಲವಾದಲ್ಲಿ ಹೋರಾಟಕ್ಕೆ ಸಿದ್ದ ಎಂದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಚೆನ್ನಪ್ಪ ಜಗಲಿ,  ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಎನ್. ಹೊಳಲಾಪುರ, ಪುರಸಭೆ ಮಾಜಿ ಅಧ್ಯಕ್ಷ ಶಂಕ್ರಣ್ಣ ಮ್ಯಾಗೇರಿ, ಎನ್.ಜಿ. ಹೊಂಬಳ, ವಿ.ಜಿ. ಪಡಗೇರಿ, ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಅಂಗಡಿ, ಕುಂದ್ರಳ್ಳಿ ಗ್ರಾಪಂ ಸದಸ್ಯ ನಾಗರಾಜ ಪಾಟೀಲ, ನೀಲಪ್ಪ ಸೆರಸೂರಿ, ತಿಪ್ಪಣ್ಣ ಸಂಶಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement