ಲಕ್ಷ್ಮೇಶ್ವರ: ವಿವಿಧೆಡೆ ಮಳೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 26
ಸಮೀಪದ ಸೂರಣಗಿ, ಬಾಲೆಹೊಸೂರು, ಹುಲ್ಲೂರು, ದೊಡ್ಡೂರು, ಶಿಗ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾನುವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಮಳೆಯಾಗಿದೆ.
ಸಮೀಪದ ದೊಡ್ಡೂರು ಗ್ರಾಮದಲ್ಲಿ ಸಿಡಿಲಿನ ಹೊಡತಕ್ಕೆ ತೆಂಗಿನ ಗಿಡಕ್ಕೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೆಂಗಿನ ಗಿಡಕ್ಕೆ ತಗುಲಿದ್ದ ಬೆಂಕಿ ನಂದಿಸಿದರು. ಭಾನುವಾರ ಸಂಜೆ ಜಿಲ್ಲಾದ್ಯಂತ ಮೋಡಕವಿದ ವಾತಾವರಣ ಮುಂದುವರಿದಿದೆ.