ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ: ಜನಸಂಪರ್ಕ ಸಭೆಯಾದ ಕೆಡಿಪಿ ಸಭೆ

Lingaraj Badiger
Updated On : 29 May 2013, 11:53 am

ಮುಂಡರಗಿ: ಇಲ್ಲಿನ ಮಿನಿ ವಿಧಾನಸೌಧ ಸಭಾ ಭವನದಲ್ಲಿ ಸೋಮವಾರ ಜರುಗಿದ ಮುಂಡರಗಿ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ಜನಸಂಪರ್ಕ ಸಭೆಯಾಗಿ ಪರಿಣಮಿಸಿತು.
ಕೆಡಿಪಿ ಸಭೆ ಎಂದರೆ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸೇರಿಸಿ ತಾಲೂಕಿನ ಅಭಿವೃದ್ಧಿ, ಪ್ರಗತಿ ಬಗ್ಗೆ ಚರ್ಚಿಸುವುದಾಗಿದೆ. ಆದರೆ ಇಲ್ಲಿನ ಮಿನಿ ವಿಧಾಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಡೆದದ್ದೇ ಬೇರೆ. ಸಭೆ ಪ್ರಾರಂಭದಲ್ಲಿ ಅಧಿಕಾರಗಳಿಂದ ಆಯಾ ಇಲಾಖೆಗಳ ಬಗ್ಗೆ ಶಾಸಕರು ಮಾಹಿತಿ ಪಡೆಯಲು ಪ್ರಾರಂಭಿಸುತ್ತಿದ್ದಂತೆಯೇ ಸಾರ್ವಜನಿಕರು, ಕಾಂಗ್ರೆಸ್‌ನ ಕೆಲ ಮುಖಂಡರು, ಆಯಾ ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರಾರಂಭಿಸಿದರು. ಅಲ್ಲದೇ ಶಾಸಕರ ಬದಲಿಗೆ ಅವರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಕಂಡುಬಂದಿತು. ಇದರಿಂದ ಕೆಲ ಅಧಿಕಾರಿಗಳು ಮುಜುಗರಕ್ಕೊಳಗಾದರು.
ಶಾಸಕರ ಎದುರಿನಲ್ಲಿರುವ ಟೇಬಲ್ ಸುತ್ತಲೂ ಅನೇಕ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ಸುತ್ತವರಿದು ಅಧಿಕಾರಿಗಳಿಗೆ ತಮ್ಮ ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಹೇಳಿದರು. ಸಭೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರ ಕುರಿತು ತಾಪಂ ಇಓ ಎಎಸ್.ವಿ. ತಿಗರಿಮಠ ಅವರನ್ನು ಸಂಪರ್ಕಿಸಿದಾಗ, ಈ ಸಭೆ ಕೇವಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮಾತ್ರ ಸಂಬಂಧಿಸಿದ್ದು. ಆದರೆ ನಮಗಾರಿಗೂ ಗೊತ್ತಿಲ್ಲದೇ ಸಾರ್ವಜನಕರು ಹಾಗೂ ಪಕ್ಷದ ಕೆಲ ಮುಖಂಡರು ಸಭೆಗೆ ಆಗಮಿಸಿದ್ದಾರೆ. ಮುಂದಿನ ಸಭೆಗಳಿಗೆ ಸಾರ್ವಜನಿಕರು ಮತ್ತು ಪಕ್ಷಗಳ ಮುಖಂಡರು ಬರದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement