ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿಚಾರಣಾಧೀನ ಕೈದಿ ಪರಾರಿ

Rashmi Kasaragodu
Updated On : 30 May 2013, 1:35 am

ಅಥಣಿ:  ಹಿಂಡಲಗಾ ಜೈಲಿನಿಂದ ಅಥಣಿಯ ನ್ಯಾಯಾಲಯಕ್ಕೆ ಕರೆದುಕೊಂಡು ಬರುತ್ತಿದ್ದ ವೇಳೆ ವಿಚಾರಣಾಧೀನ ಕೈದಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಬುಧವಾರ ಸಂಜೆ ಜರುಗಿದೆ. ಅಸ್ಲಂ ಸನದಿ (25) ಪರಾರಿಯಾದವನು. ಅನೇಕ ಕಡೆ ಕಳ್ಳತನ ಮಾಡಿದ ಆರೋಪದಲ್ಲಿ ಈತನನ್ನು ಬಂಧಿಸಿ ಇಂಡಲಗಾ ಜೈಲಿನಲ್ಲಿಡಲಾಗಿತ್ತು. ಅಥಣಿ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆ ಇದ್ದಿದ್ದರಿಂದ ಬುಧವಾರ ಪೊಲೀಸರು ಆತನನ್ನು ಇಂಡಲಗಾ ಜೈಲಿನಿಂದ ಬೆಳಗಾವಿ-ಅಥಣಿ ಬಸ್‌ನಲ್ಲಿ ಅಥಣಿಗೆ ಕರೆತರುತ್ತಿದ್ದರು. ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಬಸ್ ನಿಂತಿದ್ದಾಗ ಈತ ತಪ್ಪಿಸಿಕೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement