ಇಂದು ಅಜಾತ ನಾಗಲಿಂಗ ಲೀಲೆ ನಾಟಕ ಪ್ರದರ್ಶನ
ರೋಣ: ತಾಲೂಕಿನ ಕೊತಬಾಳ ಗ್ರಾಮದ ಅಂಕಲಗಿ ಮಠದ ಅಡವಿಶಿದ್ದೇಶ್ವರ ಸ್ವಾಮೀಜಿ 58ನೇ ಪುಣ್ಯಾರಾಧನೆ ಹಾಗೂ ರಾಜಶೇಖರ ಶಿವಯೋಗಿಗಳ 12ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕುಕನೂರಿನ ಲಲಿತಕಲಾ ನಾಟ್ಯ ಸಂಘದಿಂದ ಅಜಾತ ನಾಗಲಿಂಗ ಲೀಲೆ ಎಂಬ ಭಕ್ತಿ ಪ್ರಧಾನ ನಾಟಕವು ಮೇ 31ರಂದು ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ.
ನಾಟಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಗಂಗಾಧರ ಸ್ವಾಮೀಜಿ ವಹಿಸುವರು. ಸಾನ್ನಿಧ್ಯವನ್ನು ಗದಗ ತಾಲೂಕು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ, ನೇತೃತ್ವವನ್ನು ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸುವರು.
ವಿ.ಕೆ. ಪಾಟೀಲ, ಶರಣಪ್ಪ ಗಡಾದ, ಮಲ್ಲನಗೌಡ ನಾಯ್ಕರ, ಎಂ.ಎನ್. ಹತ್ತಿಕಟಗಿ, ಶಂಕ್ರಣ್ಣ ಸಂಕಣ್ಣವರ, ಬಸವರಾಜ ಪಾಗದ, ಈರಣ್ಣ ಯಾಳಗಿ, ಮಲ್ಲಪ್ಪ ಗೆದಗೇರಿ, ಎ.ಡಿ. ಇಟಗಿ, ಬಸವರಾಜ ಪಟ್ಟಣಶೆಟ್ಟಿ, ಮೆಹಬೂಬ ಮೋತೆಖಾನ, ಯಲ್ಲಪ್ಪ ತಳವಾರ, ಪಿ.ಎಸ್.ಪಾಟೀಲ, ಸೋಮು ಲದ್ದಿಮಠ ಹಾಗೂ ಗ್ರಾ.ಪಂ. ಅಧ್ಯಕ್ಷ, ಸದಸ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಬೀಜ, ಗೊಬ್ಬರ ಲಭ್ಯ
ಲಕ್ಷ್ಮೇಶ್ವರ: ಸರ್ಕಾರದ ಸಹಾಯ ಧನದ ಅಡಿಯಲ್ಲಿ ವಿತರಿಸುವ ಬೀಜ, ಗೊಬ್ಬರ, ಕ್ರಿಮಿನಾಶಕಗಳು ಹಾಗೂ ಪೋಷಕಾಂಶಗಳು ಲಭ್ಯವಿರುತ್ತವೆ.
ಇವುಗಳನ್ನು ಪಡೆಯಲು ರೈತರು ಕಡ್ಡಾಯವಾಗಿ ಕೃಷಿ ಪಾಸ್ ಬುಕ್ ತರಬೇಕು, ಇಲ್ಲವಾದಲ್ಲಿ ರೈತರು ತಮ್ಮ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಹೊಲದ ಖಾತಾ ಉತಾರವನ್ನು ತಂದು ಪಾಸ್ ಬುಕ್ ಮಾಡಿಸಿಕೊಂಡು ಇಲಾಖೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಕೆ.ಎ. ನದಾಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.