ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಜೇಂದ್ರಗಡ: ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆ

Lingaraj Badiger
Updated On : 31 May 2013, 12:24 pm

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 30
ಸ್ಥಳೀಯ ಕುಷ್ಟಗಿ ರಸ್ತೆಯ ಡಾ. ಜೀರೆಯವರ ಪೆಟ್ರೋಲ್ ಬಂಕ್ ಬಳಿ ಹೊಸದಾಗಿ ನಿರ್ಮಾಣವಾದ ಶಿರಡಿ ಸಾಯಿರಾಮ ಮಂದಿರ ಉದ್ಘಾಟನೆ ಹಾಗೂ ಶಿರಡಿ ಸಾಯಿರಾಮ ಅವರ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಸೂಡಿಯ ಗಜಾನನ ಸಂಸ್ಕೃತ ಪಾಠಶಾಲೆ ಪ್ರಾಂಶುಪಾಲ ಜಿ.ಆರ್. ಜೋಶಿ ಮಾತನಾಡಿ, ನಾಡಿನಲ್ಲಿ ಆಗಿಹೋದ ಎಲ್ಲ ಸಂತರು, ಶರಣರು, ಮಹಾತ್ಮರು ಯಾವುದೇ ಜಾತಿ, ಮತಕ್ಕೆ ಸೀಮಿತರಾಗದೇ ಎಲ್ಲರನ್ನು ಸಮಾನ ದೃಷ್ಟಿಯಿಂದ ಕಂಡು ಮನುಕುಲದ ಏಳ್ಗೆಗೆ ಶ್ರಮಿಸಿರುವರು. ಅಂತಹ ಮಹಾತ್ಮರಲ್ಲಿ ಶಿರಡಿ ಸಾಯಿಬಾಬಾ ಅವರು ಅಗ್ರಗಣ್ಯರು. ಇಂತಹ ಸದ್ಗುರುವಿನ ದರ್ಶನ ಭಾಗ್ಯ ಭಕ್ತರಿಗೆ ಕಲ್ಪಿಸಲು ಶ್ರಮಿಸಿದ ಡಾ. ಜೀರೆ ಅವರ ಶ್ರಮ ಶ್ಲಾಘನೀಯ ಎಂದರು.
ಹರಿಯಾಣದ ಕಾಶಿ ಪಂಡಿತ ಪ್ರಕಾಶ ಗುರೂಜಿ ಮಾತನಾಡಿ, ಗಜೇಂದ್ರಗಡದಲ್ಲಿ ಸಾಯಿರಾಮ ದೇಗುಲ ನಿರ್ಮಾಣದಿಂದ ಇಲ್ಲಿಯ ಭೂಮಿ ಪುನೀತವಾಗಿದೆ. ಧರ್ಮವು ಮನುಷ್ಯನಿಗೆ ನ್ಯಾಯದಿಂದ ನಡೆಯಲು ಹೇಳಿಕೊಡುತ್ತದೆ. ಧರ್ಮಾಚರಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ದೇಗುಲದಲ್ಲಿ 3 ದಿನ ನಡೆದ ಸಾಯಿರಾಮ ಮೂರ್ತಿ ಜತೆ ಈಶ್ವರ, ಸಾಯಿ ಗಣಪತಿ, ಸಾಯಿ ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಸ್ಮರಣೀಯ ಎಂದರು.
ಲಕ್ಷ್ಮಿ ನರಸಿಂಹ ತೈಲಂಗ ಮಾತನಾಡಿ, ಧರ್ಮದಿಂದ ನಡೆಯುವ ಮನುಷ್ಯನಿಗೆ ಯಶಸ್ಸು ಯಾವಾಗಲೂ ಅವರ ಬೆನ್ನಿಗೆ ಇರುತ್ತದೆ. ಸಾಯಿರಾಮ ಮಂದಿರ ಪವಿತ್ರ ತಾಣವಾಗಿ ಇದರ ಮೌಲ್ಯ ಹೆಚ್ಚಿಸಲು ಭಕ್ತರು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನೆಮ್ಮದಿ ಜೀವನ ಸಾಗಿಸಬೇಕು ಎಂದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಅಕ್ಕಲಕೋಟಿ ಪ್ರಸಾದ ಪಂಡಿತ, ಕಲ್ಲಿನಾಥ ಶಾಸ್ತ್ರಿ ಜೀರೆ ವಹಿಸಿದ್ದರು. ಈ ಸಂದರ್ಭದಲ್ಲಿ ರವಿಶಾಸ್ತ್ರಿ ಜೀರೆ, ಗಿರೀಶಶಾಸ್ತ್ರಿ ಜೀರೆ, ಗಿರೀಶ ವರ್ಣೇಕರ, ರಾಜೇಂದ್ರ ಘೋರ್ಪಡೆ, ಮಂಜುನಾಥ ಮ್ಯಾಕಲ್, ಆನಂದ ಮಂತ್ರಿ, ಸಂತೋಷ ಮಂತ್ರಿ, ಉಮೇಶ ಮೆಣಸಗಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement