ಉಚಿತ ನೇತ್ರ ಚಿಕಿತ್ಸಾ ಶಿಬಿರ
ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿ ವೇಲ್ಫೇರ್ ಸೊಸೈಟಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಶಿವಾಂಚಿ ಓಸಲಾಲ ಜೈನ ಸಂಘ ಮತ್ತು ಲಾಲಿದೇವಿ ಬಾಫಣಾ ಇವರ ಪ್ರಾಯೋಜಕತ್ವದಲ್ಲಿ ಜೂನ್ 1ರ ಸಂಜೆ 5 ಗಂಟೆಗೆ ಕಣ್ಣಿನ ಪೊರೆ ರೋಗಿಗಳ ತಪಾಸಣಾ ಕಾರ್ಯಕ್ರಮ ಜರುಗಲಿದೆ. ತಪಾಸಣೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡುವವರನ್ನು ಗುರುತಿಸಿ ಅವರಿಗೆ ಜೂ. 2ರಂದು 10 ಗಂಟೆಗೆ ಡಾ. ಬಿ.ಜಿ. ಹಿರೇಮಠರವರು ಶಸ್ತ್ರ ಚಿಕಿತ್ಸೆಯನ್ನು ನಡೆಸುವರು. ಆಸಕ್ತರು ರೋಟರಿ ಐ ಕೇರ್ ಸೆಂಟರ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ಚೇರ್ಮನ್ ಎ.ಎಂ. ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಚಿತ ಪ್ರವೇಶ
ಗದಗ: ಸ್ಥಳೀಯ ಪಿಜೆಎಎಸ್ ಸಮಿತಿಯ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರಿ ಗವಾಯಿಗಳ ಸಂಗೀತ ಪಾಠ ಶಾಲೆಯ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಂಧ, ಅನಾಥ, ಅಂಗವಿಕಲ, ಹಾಗೂ ಇತರೇ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿದ್ದು, ಆಸಕ್ತರು ಜೂ. 30 ರೊಳಗಾಗಿ ಪ್ರವೇಶವನ್ನು ಪಡೆಯಬಹುದು ಎಂದು ಬಸವರಾಜ ಹಿಡ್ಕಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ವತ್ ಪೂರ್ವ ಪರೀಕ್ಷಾರ್ಥಿಗಳಿಗೆ ಸೂಚನೆ
ಗದಗ: 2010ನೇ ಸಾಲಿನಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ವಿದ್ವತ್ ಪೂರ್ವ ದರ್ಜೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೆ ಮಾತ್ರ ನೇರವಾಗಿ ಹಿರಿಯ ದರ್ಜೆಯ ಪರೀಕ್ಷೆಗೆ ಕುಳಿತುಕೊಳ್ಳುವರು ಜೂ. 30 ರೊಳಗಾಗಿ ಕಡ್ಡಾಯವಾಗಿ ಪ್ರವೇಶವನ್ನು ಪಡೆಯಬೇಕು. ಅಂತವರಿಗೆ ಮಾತ್ರ 2013-14ನೇ ಸಾಲಿನ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು ನಡೆಸುವ ಪರೀಕ್ಷೆಗಳಿಗೆ ಅನುಮತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಪಾಠಶಾಲೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಮುಖ್ಯೋಪಾಧ್ಯಾಯ ಪರಶುರಾಮ ಹಡಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರೋಜನಾಬಾಯಿ ರಾಯಬಾಗಿ ನಿಧನ
ಗದಗ: ಗಜೇಂದ್ರಗಡದ ಸ್ಥಳೀಯ ವ್ಯಾಪಾರಸ್ಥ ಬಿ.ಎಂ. ರಾಯಬಾಗಿಯವರ ತಾಯಿ ಸರೋಜನಾಬಾಯಿ ಮೋತಿಲಾಲಸಾ ರಾಯಬಾಗಿ (70) ಗುರುವಾರ ನಿಧರಾದರು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ ಸಂತಾಪ ವ್ಯಕ್ತಪಡಿಸಿದ್ದಾರೆ.