ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿವೇಶನ ಹಂಚಿಕೆಯಲ್ಲಿ ತಾರತಮ್ಯ: ಆರೋಪ

Mainashree
Updated On : 1 Nov 2013, 11:52 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ನ. 1
ಪಟ್ಟಣದಲ್ಲಿ ವಾಜಪೇಯಿ ಆಶ್ರಯ ನಿವೇಶನ ಹಂಚಿಕೆಯಲ್ಲಿ ಶಾಸಕರು ಪುರಸಭೆಯ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಹಾಗೂ ಇದುವರೆಗೂ ಅರ್ಜಿ ಸಲ್ಲಿಸದೆ ಇರುವ ಜನರಿಗೆ ಹಾಗೂ ತಮಗೆ ಬೇಕಾದವರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿ ಪುರಸಭೆಯ ಕೆಜೆಪಿ ಸದಸ್ಯ ಮಹೇಶ ಹೊಗೆಸೊಪ್ಪಿನ ಈಚೆಗೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ವಾಜಪೇಯಿ ಆಶ್ರಯ ನಿವೇಶನಗಳನ್ನು ನೀಡುವಲ್ಲಿ ಈಗಾಗಲೇ ಆಯ್ಕೆ ಮಾಡಿರುವ ಪಟ್ಟಿಯಲ್ಲಿ ಅರ್ಹರ ಬದಲು ಅನರ್ಹ ಹಾಗೂ ಮನೆ ಇದ್ದವರಿಗೆ ಹಾಗೂ ನೌಕರರಿಗೆ ನಿವೇಶನಗಳನ್ನು ನೀಡಲಾಗಿದೆ. ಅದಕ್ಕಾಗಿ ಶಾಸಕರು ಆಯ್ಕೆ ಮಾಡಿರುವ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು.
ಪುರಸಭೆಗೆ ಆಗಮಿಸಿದ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಈ ತಿಂಗಳ ಕೊನೆಯಲ್ಲಿ ಆಶ್ರಯ ನಿವಾಸಿಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಕೊಡಬೇಕಾಗಿದ್ದು, ಅದಕ್ಕಾಗಿ ಪುರಸಭೆ ಸದಸ್ಯರು ತಪ್ಪು ತಿಳಿದುಕೊಳ್ಳಬಾರದು ಹಾಗೂ ಈಗಾಗಲೇ ತಯಾರಿಸಿರುವ ಪಟ್ಟಿಯಲ್ಲಿ ಅರ್ಹರಲ್ಲದ ಫಲಾನುಭವಿಗಳು ಇದ್ದಲ್ಲಿ ಅವುಗಳನ್ನು ತೆಗೆದು ಹಾಕಿ ತಪ್ಪುಗಳಾಗದಂತೆ ಸರಿಪಡಿಸೋಣ. ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಿಯನ್ನು ತಯಾರಿಸುತ್ತೇವೆ. ಇದರಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಇಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಿವೇಶನಗಳನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ. ಈಗ ನಿವೇಶನ ದೊರಯದಿರುವ ಫಲಾನುಭವಿಗಳಿಗೆ ನೀಡಲು ಕ್ರಮ ಕೈಗೊಳ್ಳಾಗುವುದು. ಕಾರಣ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದಾಗ ಅದಕ್ಕೆ ಒಪ್ಪಿದ ಸದಸ್ಯ ಮಹೇಶ ಹೊಗೆಸೊಪ್ಪಿನ ಮುಂದಿನ ದಿನಗಳಲ್ಲಿ ನಿವೇಶನ ರಹಿತರಾದ ಯೋಗ್ಯ ಫಲಾನುಭವಿಗಳನ್ನು ಆಯ್ಕೆ ಮಾಡುವುದಕ್ಕೆ ಒಪ್ಪಿ ಎಳನೀರನ್ನು ಸೇವಿಸಿ ಧರಣಿ ಹಿಂದಕ್ಕೆ ಪಡೆದರು.  
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ತಾಪಂ ಸದಸ್ಯ ಚನ್ನಪ್ಪ ಜಗಲಿ, ಪುರಸಭೆಯ ಮಾಜಿ ಅಧ್ಯಕ್ಷ ವಿ.ಜಿ. ಪಡಗೇರಿ, ಜಯಕ್ಕ ಕಳ್ಳಿ, ಸದಸ್ಯ ರಾಜು ಕುಂಬಿ, ಗಣಪತಿ ಬೇವಿನಮರದ, ರಾಮಣ್ಣ ರಿತ್ತಿ, ದಾದಾಪೀರ ಮುಚ್ಚಾಲೆ, ನಾಗಪ್ಪ ಓಂಕಾರಿ, ಪುರಸಭೆಯ ಮುಖ್ಯಾಧಿಕಾರಿ ಉಮೇಶ ಗುಡ್ಡದ, ಸೋಮನಗೌಡ ಪಾಟೀಲ. ಶಂಕ್ರಣ್ಣ ಗೋಡಿ, ಪದ್ಮರಾಜ ಪಾಟೀಲ, ನೀಲಪ್ಪ ಕರ್ಜಕಣ್ಣವರ, ಬಸಪ್ಪ ಹಾದಿಮನಿ, ಪ್ರೇಮಾ ಶೇಠ, ಸುರೇಶ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement