ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಭ್ರಮದ ರಾಜ್ಯೋತ್ಸವ

Mainashree
Updated On : 1 Nov 2013, 11:52 am

ನಾಡಿನ ರಕ್ಷಣೆಗೆ ಶ್ರಮಿಸಿ: ಜಿ.ಎಸ್. ಪಾಟೀಲ್
ರೋಣ:  ನೆಲ, ಜಲ, ಭಾಷೆ ಮತ್ತು ನಾಡಿನ ರಕ್ಷಣೆಗೆ ಪ್ರತಿಯೊಬ್ಬರೂ ಒಂದಾಗಿ ಹೋರಾಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ, ತಾಪಂ, ಪುರಸಭೆ, ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾಡಿಗೆ ಧಕ್ಕೆಯಾಗುವ ಸಂದರ್ಭದಲ್ಲಿ ಐಕ್ಯತೆಯಿಂದ ಹೋರಾಡಿದಲ್ಲಿ, ನಾಡ ಹಬ್ಬಗಳ ಆಚರಣೆಗೆ ಮೆರುಗು ಹಾಗೂ ಮಹತ್ವ ಸಿಕ್ಕಂತಾಗುತ್ತದೆ.  ಕರ್ನಾಟಕದ ಪರಿಕಲ್ಪಣೆ, ನಾಡಿನ ವೈಶಿಷ್ಟತೆ ಬಗ್ಗೆ ತಿಳಿಯುವುದು ಅತ್ಯಂತ ಮುಖ್ಯವಾಗಿದೆ. ನಾವೆಲ್ಲರೂ ಕನ್ನಡ ಭಾಷಾಭಿಮಾನಿಗಳಾಗಬೇಕು. ಅಂದಾಗ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಕನ್ನಡ ಭಾಷೆಗೆ ಒತ್ತು ಕೊಡುವಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಲಿದೆ.
ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ತಾಲೂಕಿನ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ, ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಮಹನೀಯರ ಹೋರಾಟದ ಕುರಿತು ತಿಳಿಯಬೇಕು ಎಂದರು.  ತಹಸೀಲ್ದಾರ್ ಎ.ಜಿ. ಪಂಡೀತ ಅವರು ಸ್ವಾಗತಿಸಿ, ರಾಜ್ಯೋತ್ಸವದ ಸಂದೇಶ ನೀಡಿದರು. ನರೇಗಲ್ ಸರ್ಕಾರಿ ಪ.ಪೂ ಕಾಲೇಜ್ ಉಪನ್ಯಾಸಕ ಬಿ.ವಿ. ಚನ್ನಪ್ಪಗೌಡ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಈಚೆಗೆ ಅಂಗನವಾಡಿ ಕೇಂದ್ರದಲ್ಲಿ ಸುಡುವ ಸಾಂಬಾರನಲ್ಲಿ ಬಿದ್ದು ಮೈ ಸುಟ್ಟುಕೊಂಡ ಬಾಲಕಿ ಸಂಜನಾ ಉದ್ದಾರ ಇವಳಿಗೆ ಬಾಲಸಂಜಿವೀನಿ ಯೋಜನೆಯಿಂದ ನೀಡಿದ ರು. 35 ಸಾವಿರದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದ ಮೊದಲು ಪಟ್ಟಣದ ಎಸ್.ಆರ್. ಪಾಟೀಲ ಮಾದರಿ ಕೇಂದ್ರ ಶಾಲೆಯ ಆವರಣದಿಂದ ಭುವನೇಶ್ವರಿ ಭಾವಚಿತ್ರ ಮೇರವಣಿಗೆ ಪ್ರಾರಂಭವಾಗಿ, ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಹಳೇ ತಹಸೀಲ್ದಾರ್ ಕಚೇರಿ ತಲುಪಿತು. ಐ.ಎಸ್.ಪಾಟೀಲ, ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ಬಿಇಒ ಐ.ಡಿ.ಅಸುಂಡಿ, ಎಂ.ಬಿ. ದಾನರಡ್ಡಿ, ಎಸ್.ಎ. ಸೂಡಿಶೆಟ್ಟರ, ಕೆ.ಎಲ್. ಕಟ್ಟಿಮನಿ, ಶಿವಪುತ್ರಪ್ಪ ದೊಡ್ಡಮನಿ, ಬಿ.ಎಸ್. ಮೋಕಾಸಿ, ಶರಣಪ್ಪ ದೊಡ್ಡಮನಿ, ಸಂಗು ನವಲಗುಂದ, ನಾಜಬೇಗಂ ಯಲಿಗಾರ, ಎನ್.ಎಸ್. ಕೂಡಲ, ವಿ.ಆರ್. ಗುಡಿಸಾಗರ, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಎಸ್.ವೈ. ಯಡಳ್ಳಿ ನಿರೂಪಿಸಿದರು. ಪಿ.ಎಚ್. ಕಡಿವಾಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement