ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 1 Nov 2013, 11:52 am

ಪಡಿತರ: ಸಹಾಯವಾಣಿ
ಗದಗ: ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು, ಶಿರಸ್ತೇದಾರರ ಹಾಗೂ ನಿರೀಕ್ಷಕರಿಗೆ ಮೊಬೈಲ್ ಸಿಮ್‌ಗಳನ್ನು ವಿತರಿಸಿದೆ. ಸಾರ್ವಜನಿಕ ಪಡಿತರ ಚೀಟಿ ನ್ಯಾಯ ಬೆಲೆ ಅಂಗಡಿ ಹಾಗೂ ಆಹಾರ ಇಲಾಖೆಯ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಬಹುದು. ಗದಗ (ನಗರ) ಸಹಾಯಕ ನಿರ್ದೇಶಕರು (8792122705), 08372-251025, ಆಹಾರ ಶಿರಸ್ತೇದಾರರು ಗದಗ ತಾಲೂಕು (9448991229), 08372-250021, ಮುಂಡರಗಿ (9448991229), 08371 202002, ನರಗುಂದ (9448991406), 08377 241064, ರೋಣ (9448991406) 08381 267037 ಹಾಗೂ ಶಿರಹಟ್ಟಿ ತಾಲೂಕಿನ ಆಹಾರ ಶಿರಸ್ತೇದಾರರು (9448991416), 08487 242216 ಇವರನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಬಹುದು ಅಥವಾ ತಮ್ಮ ಪಡಿತರ ಪ್ರದೇಶದ ಆಹಾರ ನಿರೀಕ್ಷಕರ ಸಂಖ್ಯೆಯನ್ನು ಪಡೆಯಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕಾಮಗಾರಿ ಆರಂಭಿಸಿ
ಗದಗ: ಈ ಹಿಂದಿನ ಅಧಿಕಾರಾವಧಿಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ರು. 30 ಕೋಟಿ ಅಭಿವೃದ್ಧಿ ಯೋಜನೆಯು ಇಲ್ಲಿಯವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಕ್ರಮಕೈಗೊಂಡು ಈ ಯೋಜನೆ ಕಾಮಗಾರಿ ಶೀಘ್ರ ಆರಂಭಗೊಳಿಸಲು ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ ಆಗ್ರಹಿಸಿದ್ದಾರೆ.  ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಆಡಳಿತದಲ್ಲಿ ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಗದಗ-ಬೆಟಗೇರಿ ನಗರಕ್ಕೆ ನಗರೋತ್ಥಾನ ಯೋಜನೆಯಡಿಯಲ್ಲಿ ರು. 30 ಕೋಟಿ ಮಂಜೂರಾಗಿ ಅಂದಿನ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ, ಶಾಸಕರಾಗಿದ್ದ ಶ್ರೀಶೈಲಪ್ಪ ಬಿದರೂರ ಅವರ ಅಣತಿಯಂತೆ ಜಿಲ್ಲಾಡಳಿತದಿಂದ ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ಕ್ರಿಯಾಯೋಜನೆ ತಯಾರಾಗಿ ನಗರಾಡಳಿತ ಇಲಾಖೆಯಿಂದ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಈ ಮಹತ್ವದ ಕಾಮಗಾರಿಗೆ ಕಾರ್ಯಾದೇಶ ನೀಡದೆ ರಾಜ್ಯ ಸರ್ಕಾರ ಹಾಗೂ ಈ ಭಾಗದ ಮಂತ್ರಿಗಳು ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಈ ಕಾಮಗಾರಿಗೆ ಕಾರ್ಯಾದೇಶ ನೀಡಬೇಕು. ಇಲ್ಲದೇ ಹೋದಲ್ಲಿ ಗದಗ ಜಿಲ್ಲಾ ಬಿಜೆಪಿ ವತಿಯಿಂದ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಗದಗ:  ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಜೂನ್ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ವಿವಿಧ ವಿಷಯಗಳ ಭಾಷೆಗಳ ಲೇಖಕರು, ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆ ಸಮಿತಿ ನಿಬಂಧನೆಗೊಳಪಟ್ಟ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಬೆಂಗಳೂರು ಕಚೇರಿಯಲ್ಲಿ  ಗ್ರಂಥಸ್ವಾಮ್ಯ ವಿಭಾಗದಲ್ಲಿ ಕಾಪಿರೈಟ್ ಮಾಡಿಸಿ ಸೂಚಿತ ದಾಖಲೆಗಳೊಂದಿಗೆ ಪುಸ್ತಕದ ಒಂದು ಪ್ರತಿಯೊಂದಿಗೆ ಅರ್ಜಿಗಳನ್ನು ನವೆಂಬರ್ 30ರ ಒಳಗೆ ಸಲ್ಲಿಸಬೇಕು. ಅರ್ಜಿಗಳನ್ನು ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ 4ನೇ ಮಹಡಿ ವಿಶ್ವೇಶ್ವರಯ್ಯ ಮುಖ್ಯ ಗೋಪುರ, ಅಂಬೇಡ್ಕರ್ ಬೀದಿ, ಬೆಂಗಳೂರು ಇವರಿಗೆ ಕಳುಹಿಸಬೇಕು.  ನಿಬಂಧನೆ ಹಾಗೂ ಹೆಚ್ಚಿನ ಮಾಹಿತಿಗೆ ಗದಗ ಜಿಲ್ಲಾಡಳಿತ ಭವನದಲ್ಲಿ ನಗರ ಕೇಂದ್ರ ಗ್ರಂಥಾಲಯದ (ದೂ. 08372-220919) ಕಚೇರಿಗೆ ಸಂಪರ್ಕಿಸಲು ತಿಳಿಸಲಾಗಿದೆ.
ಭಾಷೆ ಬೆಳವಣಿಗೆಗೆ ಪ್ರಯತ್ನಿಸಿ: ಶಾಂತಾ ದಂಡಿನ
ನರಗುಂದ:  ನಾಡಿನ ನೆಲ, ಜಲ ಭಾಷೆಗೆ ಅನ್ಯಾಯವಾಗದ ರೀತಿಯಲ್ಲಿ ನಾವೆಲ್ಲಾ ಕಾಯಬೇಕಿದೆ ಎಂದು ಜಿಪಂ ಸದಸ್ಯ ಶಾಂತಾ ದಂಡಿನ ಹೇಳಿದರು.  ಅವರು ತಾಲೂಕಿನ ಭೈನರಹಟ್ಟಿ ಗ್ರಾಮದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ, ವೇದಿಕೆ, ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ದೊರೆಸ್ವಾಮಿ ವಿರಕ್ತಮಠ ಇವುಗಳ ಆಶ್ರಯದಲ್ಲಿ ಶುಕ್ರವಾರದಿಂದ (ನ 1. ರಿಂದ 16) ಪ್ರಾರಂಭವಾದ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ಸಾಹಿತಿ ರುದ್ರನಾಥ ಕಲ್ಯಾಣಿಶಟ್ಟಿ ಮಾತನಾಡಿದರು. ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡದ ಕೈಂಕರ್ಯಕ್ಕೆ ನಾವು ಸಿದ್ಧರಾಗೋಣ, ನಮ್ಮ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲಾ ಜಾಗೃತಿ ವಹಿಸೋಣ ಎಂದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ್ಯ ಬಿ.ಬಿ. ಐನಾಪುರ, ಗ್ರಾಪಂ ಅಧ್ಯಕ್ಷ ಹನುಮವ್ವ ಮಾದರ, ಉಪಾಧ್ಯಕ್ಷ ಪರವ್ವ ಐನಾಪುರ, ವೈ.ಬಿ. ಮೊರದಬ, ಹನುಮಂತ ಸಂಗಿಟಿ, ಹನುಮಂತ ಐನಾಪುರ, ಆರ್.ಎಚ್. ತಿಗಡಿ, ರಮೇಶ ಐನಾಪುರ, ರೇಣವ್ವ ಮೇಟಿ, ಎಸ್.ಎಂ. ಅಪೋಜಿ, ಶಾಂತಕುಮಾರ ಭಜೆಂತ್ರಿ, ಎಸ್.ಎಸ್. ಪಾಟೀಲ, ಬಿ.ವೈ. ಬಸಿಡೋಣೆ,  ಗ್ರಾಪಂ ಅಧಿಕಾರಿ ವಾಸುದೇವ ಪೂಜಾರ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ವಿರೂಪಾಕ್ಷಪ್ಪ ಮನನೇಕೊಪ್ಪ, ಕಸಾಪ ಅಧ್ಯಕ್ಷ ಪಿ.ಸಿ. ಕಲಹಾಳ, ಚನ್ನಬಸಪ್ಪ ಕಂಠಿ ಮುಂತಾದವರು ಇದ್ದರು. ಆರ್.ಬಿ. ಚಿನಿವಾಲರ ಸ್ವಾಗತಿಸಿದರು. ರಮೇಶ ಐನಾಪುರ ನಿರೂಪಿಸಿದರು. ಜಿ.ಬಿ. ಘಂಟನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement