ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಸ್ತ್ರೀಯ ಭಾಷೆ ಸ್ಥಾನಮಾನ ಜಾರಿ ವಿಳಂಬ: ಖಂಡನೆ

Vishwanath S
Updated On : 4 Nov 2013, 11:40 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ನ. 3
ಎರಡು ಸಾವಿರಕ್ಕೂ ಅಧಿಕ ಇತಿಹಾಸ ಹೊಂದಿದ ಕನ್ನಡ ಭಾಷೆಗೆ ಕೇಂದ್ರ ನೀಡಿದ ಶಾಸ್ತ್ರೀಯ ಭಾಷಾ ಸ್ಥಾನಮಾನ ಭಾಷಾಭಿಮಾನದ ಕೊರತೆಯಿಂದಾಗಿ ಅನುಷ್ಠಾನಗೊಳ್ಳದಿರುವುದು ನೋವಿನ ಸಂಗತಿ. ಈ ನಿಟ್ಟಿನಲ್ಲಿ ನಾಡಿನ ನೆಲ-ಜಲ ಭಾಷೆ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಒಗ್ಗಟ್ಟಿನಿಂದ ಹೋರಾಡುವುದು ಅನಿವಾರ್ಯ ಎಂದು ಡಾ. ಬಿ.ವಿ. ಕಂಬಳ್ಯಾಳ ಹೇಳಿದರು.
ಸ್ಥ್ಥಳೀಯ ಕಟ್ಟಿ ಬಸವೇಶ್ವರ ರಂಗ ಮಂದಿರದಲ್ಲಿ 58ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶುಕ್ರವಾರ ಸಂಜೆ ಪುರಸಭೆ ವತಿಯಿಂದ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಾತೃ ಭಾಷೆ ಮಹತ್ವ ನೆರೆ ರಾಜ್ಯದವರನ್ನು ನೋಡಿ ಕಲಿಯುವ ಅವಶ್ಯಕತೆಯಿದೆ. ಏಕೆಂದರೆ ನಾಡಿನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅವರಲ್ಲಿರುವ ನಿಸ್ವಾರ್ಥ ಮನೋಭಾವ ನಮಗೇಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು.
ಈಗಲಾದರೂ ನಾಡು-ನೆಲ-ಜನ-ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸದಿದ್ದರೆ ನಾಡಿಗೆ ಕೇಡು ಕಟ್ಟಿಟ್ಟ ಬುತ್ತಿ. ಈ ದಿಸೆಯಲ್ಲಿ ಸ್ವಾರ್ಥ ತೊರೆದು ಸಮೃದ್ಧ ನಾಡುಕಟ್ಟುವಲ್ಲಿ ಎಲ್ಲ ಕನ್ನಡಿಗರು ಪಣತೊಡಬೇಕು ಎಂದರು.
ಎಚ್.ಎಸ್. ಸೋಂಪುರ ಮಾತನಾಡಿ, ನಾಡು, ನುಡಿ, ನೆಲ, ಜಲ ರಕ್ಷಣೆಯ ಹೋರಾಟ ಕೇವಲ ಭಾಷಣಕ್ಕೆ ಮೀಸಲಾಗದೆ ಕಾರ್ಯರೂಪದಲ್ಲಿ ಜಾರಿಯಾದಾಗ ಮಾತ್ರ ಕನ್ನಡ ರಾಜ್ಯೋತ್ಸವ ಪರಿಕಲ್ಪನೆ ಸಾಧ್ಯ ಎಂದರು.
ಪುರಸಭಾ ಅಧ್ಯಕ್ಷೆ ಕವಿತಾ ಜಾಲಿಹಾಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಬಳಿಕ ಸಂದಿಗವಾಡ ಗ್ರಾಮದ ಕರಡಿ ಮಜಲು, ಅಬ್ಬಿಗೇರಿಯ ಡೊಳ್ಳು ಕುಣಿತ, ಶಾಲಾ ಮಕ್ಕಳ ಹಾಗೂ ಚೈತ್ರಾ ಮೆಲೋಡಿಸ್ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
ಪುರಸಭೆ ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸ್ಥಾಯಿ ಸಮಿತಿ ಮುಖ್ಯಸ್ಥ ಅಶೋಕ ವನ್ನಾಲ, ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಮುಖ್ಯಾಧಿಕಾರಿ ಕೆ.ಐ. ನಾಗನೂರ, ಶರಣಪ್ಪ ರೇವಡಿ, ಪ್ರಭು ಚವಡಿ, ಚಂದ್ರಶೇಖರ ಚಳಗೇರಿ, ಶೇಖಪ್ಪ ಇಟಗಿ, ಬುಡ್ಡಪ್ಪ ಮೂಲಿಮನಿ, ಮಕ್ತುಂಬಿ ಹಣಗಿ, ಸುಜಾತಾ ಚುಂಚಾ, ಶಾರವ್ವ ತಳವಾರ, ಶಾರದಾ ರಾಠೋಡ, ವಿಜಯಲಕ್ಷ್ಮೀ ಚಟ್ಟೇರ, ಸುಮಿತ್ರಾ ತೊಂಡಿಹಾಳ, ಸಿ.ವಿ. ಕುಲಕರ್ಣಿ, ಪಿ.ಎನ್. ದೊಡ್ಡಮನಿ, ಎಂ.ಬಿ. ಒಂಟಿ, ಮಹೇಶ ನಿಡಶೇಶಿ, ಜಿ.ಎನ್. ಕಾಳೆ, ಹೇಮಾ ಮಾದಗುಂಡಿ ಮುಂತಾದವರು ಉಪಸ್ಥಿತರಿದ್ದರು.
ಎಂ.ಎಸ್. ಹಡಪದ ಸ್ವಾಗತಿಸಿದರು. ಎನ್.ಕೆ. ಬುಟ್ಟಾನವರ ನಿರೂಪಿಸಿದರು. ಎನ್.ಎಚ್. ಖುದಾನವರ ವಂದಿಸಿದರು.
ಮಾತೃ ಭಾಷೆ ಮಹತ್ವ ನೆರೆ ರಾಜ್ಯದವರನ್ನು ನೋಡಿ ಕಲಿಯುವ ಅವಶ್ಯಕತೆಯಿದೆ. ಏಕೆಂದರೆ ನಾಡಿನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅವರಲ್ಲಿರುವ ನಿಸ್ವಾರ್ಥ ಮನೋಭಾವ ನಮಗೇಕೆ ಬರುವುದಿಲ್ಲ.
- ಡಾ. ಬಿ.ವಿ. ಕಂಬಳ್ಯಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement