ಇಂದು ತ್ರೈಮಾಸಿಕ ಶಿವಾನುಭವ
ಮುಂಡರಗಿ: ಪಟ್ಟಣದ ತೋಂಟದಾರ್ಯ ಮಠದಲ್ಲಿ ನ. 6ರಂದು ಸಂಜೆ 7.30ಕ್ಕೆ 67ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮ ಜರುಗಲಿದೆ. ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಹೂವಿನಹಡಗಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ. ಸತೀಶ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಕೆ.ಎ. ಹಿರೇಮಠ, ಶ್ರೇಷ್ಠ ವರ್ತಕ ಪ್ರಶಸ್ತಿ ವಿಜೇತ ಹೇಮಂತಗೌಡ ಪಾಟೀಲ ಹಾಗೂ ಜಿಪಂ ನೂತನ ಸದಸ್ಯ ಹೇಮಗಿರೀಶ ಹಾವಿನಾಳ ಅವರನ್ನು ಸನ್ಮಾನಿಸಲಾಗುವುದು. ಶಿವಾನುಭವ ಕಾರ್ಯಕ್ರಮದಲ್ಲಿ ಸುಷ್ಮಾ ಅರಿಸಿಣದ ಧರ್ಮಗ್ರಥ ಪಠಣ ಮಾಡಲಿದ್ದು, ಜಯಲಕ್ಷ್ಮೀ ತಿಮ್ಮಾಪುರ ವಚನ ಚಿಂತನ ಮಾಡಲಿದ್ದಾರೆ ಎಂದು ಪ್ರವಚನ ಸಮಿತಿ ಅಧ್ಯಕ್ಷ ಧ್ರುವಕುಮಾರ ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗದಗ: ಬಾಲಕ ಕಾಣೆ
ಗದಗ: ಅ. 18ರಂದು ಗದಗಿನ ನಗರಸಭೆ ಆವರಣದಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟ ಮಾಡಿ ಮನೆಗೆ ಬರುವುದಾಗಿ ಹೇಳಿ ಹೋಗಿದ್ದ 11 ವರ್ಷದ ಬಾಲಕ ಸೋಮಶೇಖರ ಕಾಣೆಯಾಗಿದ್ದಾನೆ. ಬಾಲಕ ಕೋಲುಮುಖ, ತೆಳ್ಳಗೆ ಗೋದಿಕೆಂಪು ಮೈಬಣ್ಣ, ಬಿಳಿ ಟಿ-ಶರ್ಟ್, ಬಿಳಿ ಚೆಡ್ಡಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಯಾರಿಗಾದರೂ ಈ ಬಾಲಕನ ಕುರಿತು ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಗದಗ ಬಡಾವಣೆ ಠಾಣೆಯ ಪಿಎಸ್ಐ ಎಸ್.ಕೆ. ಹೊಳೆಯಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.