ಉದಯವಾಗಲಿ.. ನಾಡಗೀತೆಯಾಗಲಿ
ಕನ್ನಡಪ್ರಭ ವಾರ್ತೆ, ಗದಗ, ನ. 5
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಮತ್ತೆ ಜಾರಿಯಾಗಲಿ. ಇದು ಕೇವಲ ನನ್ನದಷ್ಟೇ ಅಭಿಪ್ರಾಯವಲ್ಲ, ಸರ್ವಕನ್ನಡಿಗರ ಅಭಿಪ್ರಾಯ ಎಂದು ನಾಡಕವಿ ಹುಯಿಲಗೋಳ ನಾರಾಯಣರಾವ್ ಕಲಾ ಮತ್ತು ಸಾಂಸ್ಕೃತಿಯ ರಾಜ್ಯಾಧ್ಯಕ್ಷ ಹಾಗೂ ಹಿರಿಯ ಕವಿ ಸಿ.ಜಿ.ಬಿ. ಹಿರೇಮಠ ಹೇಳಿದರು.
ನಗರದ ನಾಡಕವಿ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ 58ನೇ ಕನ್ನಡ ರಾಜ್ಯೋತ್ಸವ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಬಸವ ಕಲ್ಯಾಣ ಸಮಿತಿ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ, ಜಿಲ್ಲಾ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ನಿಸ್ಸಾರ್ ಅಹ್ಮದ್ ಖಾಜಿ ಮುಂತಾದವರು ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಖಾಸಗಿ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಎ.ಎನ್. ಶಾಲಗಾರ ಅವರನ್ನು ಸನ್ಮಾನಿಸಲಾಯಿತು.
ಪಿ. ಸುಬ್ರಮಣ್ಯಂರೆಡ್ಡಿ, ಎಂ.ಬಿ. ದೇಸಾಯಿ, ಅಯ್ಯಪ್ಪ ನಾಯ್ಕರ, ಅಜಿತ ಹುಯಿಲಗೋಳ, ಎಂ.ಆರ್. ನದಾಫ್, ಕೆ.ಎಫ್. ಢಾಲಾಯತ, ರಾಮಣ್ಣ ಬಳ್ಳಾರಿ ಉಪಸ್ಥಿತರಿದ್ದರು.
ಎಸ್.ಎಸ್. ರಡ್ಡಿ ಸ್ವಾಗತಿಸಿದರು. ಶಿವಕುಮಾರ ರಾಮನಕೊಪ್ಪ ವಂದಿಸಿದರು.
--