ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನರಗುಂದ 23 ವಾರ್ಡ್‌ಗಳ ಅಭಿವೃದ್ಧಿಗೆ ಬದ್ಧ: ಶಾಸಕ ಯಾವಗಲ್

Lingaraj Badiger
Updated On : 6 Nov 2013, 11:27 am

ನರಗುಂದ: ಪಟ್ಟಣದ 23 ವಾರ್ಡ್‌ಗಳ ಅಭಿವೃದ್ಧಿಗೆ ಯಾವುದೇ ತಾರತ್ಯಮ ಮಾಡದೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಬಿ.ಆರ್. ಯಾವಗಲ್ಲ ಹೇಳಿದರು.
ಈಚೆಗೆ ಪಟ್ಟಣದ ಮಾರುತಿ ನಗರದ ಬೆಳದಡಿ ಶ್ರೀ ದೇವಸ್ಥಾನದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಮಾತನಾಡಿ, ಅಭಿವೃದ್ಧಿ ಕಾರ್ಯಗಳಾಗಬೇಕಾದರೆ ಉತ್ತಮ ಕೆಲಸ ಮಾಡುವ ಜನಪ್ರತಿನಿಧಿಗಳಿರಬೇಕು. ಶಾಸಕ ಬಿ.ಆರ್. ಯಾವಗಲ್ಲ ಸಾಕಷ್ಟು ಅನುಭವಿಗಳು, ಚಿಂತಕರಿದ್ದು ಅವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಕ್ಷೇತ್ರಕ್ಕೆ ಲಭ್ಯವಾಗಲಿ ಎಂದರು.
ಬಸಪ್ಪ ಸವದತ್ತಿ, ಬಾಬುಗೌಡ ತಿಮ್ಮನಗೌಡ್ರ, ಸಿ.ಎಸ್. ಪಾಟೀಲ, ಪಿ.ಎಸ್. ನಾಶಿಶಟ್ಟರು, ಪುರಸಭೆ ಸದಸ್ಯ ಸಿ.ಬಿ. ಪಾಟೀಲ, ವೆಂಕರಡ್ಡಿ ದೇವರಡ್ಡಿವರ, ಯಲ್ಲಪ್ಪ ಸಾಬಳೆ, ರವಿ ಚಿಂತಾಲ, ಚನ್ನಬಸಪ್ಪ ಕಂಠಿ, ಸಲೀಂ ಮೇಗಲಮನಿ, ಶಿಶು ಅಭಿವೃದ್ಧಿ ಅಧಿಕಾರಿ ಟಿ.ಜಿ. ಶಂಕರಮೂರ್ತಿ, ಶರಣಪ್ಪ ರೋಣದ, ಅಶೋಕ ಸೆಳಕೆ, ಮುದ್ದನಗೌಡ್ರ, ಎಸ್.ಐ. ಅಂಕಲಿ ಮುಂತಾದವರು ಇದ್ದರು.

ಹೋಮ ಹವನ...
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬುಧವಾರ ಉದ್ಘಾಟನೆಗೊಳ್ಳಲಿರುವ ಸಮುದಾಯ ಭವನದ ವಾಸ್ತು ಶಾಂತಿ ಪೂಜೆಯನ್ನು ಮಂಗಳವಾರ ಬೆಳಗ್ಗೆ ಹೋಮ ಹವನಗಳೊಂದಿಗೆ ಆರಂಭಿಸಲಾಯಿತು. ರಂಭಾಪುರಿ ಪೀಠದ ದ್ವಾರಕಾಚಾರ್ಯ ಶಾಸ್ತ್ರಿಗಳಿಂದ ಹೋಮ ಹವನ ಕ್ರಿಯೆಗಳು ಪ್ರಾರಂಭಗೊಂ್ಙವು. ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ಜಿ.ಎಸ್. ಗಡ್ಡದೇವರ ಮಠ ಹಾಗೂ ಆನಂದ ಮೆಕ್ಕಿ, ಎಸ್.ಎಸ್. ಬಾಳಿಹಳ್ಳಿಮಠ, ಆರ್.ಎಫ್.ಪುರಾಣಿಕಮಠ, ಸೋಮಣ್ಣ ವಡಕಣ್ಣವರ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಪಾಟೀಲ, ಕೆಸಿಸಿ ಬ್ಯಾಂಕ ನಿರ್ದೇಶಕ ಸುನೀಲ ಮಹಾಂತಶೆಟ್ಟರ್, ಪ್ರೊ. ಎಸ್.ಎನ್. ಪಾಟೀಲ, ಡಾ. ವೈ.ಎಫ್. ಹಂಜಿ, ಚೆನ್ನಪ್ಪ ಕೋಲಕಾರ, ಶಿವಲಿಂಗಪ್ಪ ಕಾಳಪ್ಪನವರ, ಎಪಿಎಂಸಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ್, ಸೋಮಣ್ಣ ಮುಳಗುಂದ, ಚೆಂಬಣ್ಣ ಬಾಳಿಕಾಯಿ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement