ಲಕ್ಷ್ಮೇಶ್ವರ:ಇಂದುಸಮುದಾಯ ಭವನ ಉದ್ಘಾಟನೆ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಜ. ವೀರ ಗಂಗಾಧರ ಶ್ರೀಗಳ ಸಮುದಾಯ ಭವನದ ಉದ್ಘಾನೆ ನ. 6ರಂದು ಬೆಳಗ್ಗೆ 7.30ಕ್ಕೆ ರಂಭಾಪುರಿ ಜ. ವೀರಸೋಮೇಶ್ವರ ಶ್ರೀಗಳ ಇಷ್ಟಲಿಂಗ ಪೂಜೆಯೊಂದಿಗೆ ಪ್ರಾರಂಭವಾಗುವುದು. ಪಟ್ಟಣದ ಸೋಮೇಶ್ವರ ದೇವಸ್ಥಾನದಿಂದ 108 ಕುಂಭಗಳನ್ನು ಹೊತ್ತು ಮಹಿಳೆಯರೊಂದಿಗೆ ಜ. ವೀರಗಂಗಾಧರ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ರಂಭಾಪುರಿ ಪೀಠದ ಜ. ವೀರಸೋಮೇಶ್ವರ ಶ್ರೀ ಉದ್ಘಾಟಿಸುವರು. ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀ ನೇತೃತ್ವ, ಕಲಾದಗಿ ಚೆಂದ್ರಶೇಖರ ಶ್ರೀ ಸಮ್ಮುಖ ವಹಿಸುವರು. ಪಟ್ಟಣದ ಮಳೆ ಮಲ್ಲಿಕಾರ್ಜುನ ಶ್ರೀ ಉಪದೇಶಾಮೃತ ನೀಡುವುರು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ್ ಹಾಗೂ ಜಿ.ಎಸ್. ಗಡ್ಡದೇವರಮಠ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
--
ಕನ್ನಡ ಅತಿ ಶ್ರೀಮಂತ ಭಾಷೆ
ನರಗುಂದ: ದೇಶದಲ್ಲಿ ಸಾವಿರಾರು ಭಾಷೆಗಳಿವೆ. ಆ ಭಾಷೆಯಲ್ಲಿ ಕನ್ನಡ ಭಾಷೆ ಅತಿ ಶ್ರೀಮಂತವಾಗಿದ್ದು, ಇಂತಹ ಕನ್ನಡ ಭಾಷೆಯಲ್ಲಿಯೇ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ ಎಂದು ಶಿಕ್ಷಕ ಸುರೇಶ ಬನ್ನಿಗಿಡದ ಹೇಳಿದರು. ಇತ್ತೀಚಿಗೆ ತಾಲೂಕಿನ ರಡ್ಡಿರೇನಾಗನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನ ಗುರು ಎಸ್.ಎಸ್. ಮರೋಳ ಮಾತನಾಡಿದರು.