ಶಿಕ್ಷಣದಿಂದ ಬಾಳು ಸುಂದರ
ನರಗುಂದ: ಶಿಕ್ಷಣದಿಂದ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಅದಕ್ಕಾಗಿ ಎಲ್ಲ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ನೀಡಬೇಕು ಎಂದು ಶಾಸಕ ಬಿ.ಆರ್. ಯಾವಗಲ್ಲ ಹೇಳಿದರು.
ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ಈ ಚುನಾವಣೆಯಲ್ಲಿ ಬಹಳ ವಿಶ್ವಾಸ ಇಟ್ಟು ಜನರು ನನ್ನನು ಆಯ್ಕೆ ಮಾಡಿದ್ದಾರೆ. ಹೀಗಾಗಿ, ನನ್ನ ಅಧಿಕಾರಾವಧಿಯಲ್ಲಿ ಯಾವುದೇ ದ್ವೇಷ ರಾಜಕರಾಣ ಮಾಡದೇ ಈ ಕ್ಷೇತ್ರದ ಸರ್ವ ಜನಾಂಗದ ಅಭಿವೃದ್ಧಿಗೆ ಗಮನ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶರಣಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷ ಗೋವಿಂದರಡ್ಡಿ ಸಿದ್ನಾಳ, ತಾಪಂ ಸದಸ್ಯ ಮಲ್ಲಪ್ಪ ಮೇಟಿ, ಶಿವನಗೌಡ ಹೆಬ್ಬಳ್ಳಿ, ರಾಚಪ್ಪ ಅಳಗವಾಡಿ, ಗಿರಿಯಪ್ಪಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ರಾಜು ಕಲಾಲ, ವಿಠಲ ಶಿಂಧೆ, ಎಫ್.ವೈ. ದೊಡಮನಿ, ಯಲ್ಲಪ್ಪ ಯಡಹಳ್ಳಿ, ಡಾ. ಎಲ್.ಎಚ್. ಕರಮಡಿ, ಶಿವಾ ಹೆಬ್ಬಳ್ಳಿ, ಸಮನ್ವಧಿಕಾರಿ ಸೋಲಾಪುರಿ, ಶಿವಾನಂದ ಭರಮಪ್ಪನವರ, ಬಸವರಡ್ಡಿ ಹಂಚಿನಾಳ, ಅರ್ಜುನಪ್ಪ ಈಟಿ, ಶಾಲಾ ಶಿಕ್ಷಕರು ಹಾಜರಿದ್ದರು. ವಿ.ಎಸ್. ಅಲ್ಮಲ ಸ್ವಾಗತಿಸಿದರು, ಜಿ.ಎಸ್. ದೊಡ್ಡಲಿಂಗಪ್ಪನವರ ನಿರೂಪಿಸಿದರು.