ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉಪನಿರ್ದೇಶಕರಿಂದ ಕಿರುಕುಳ: ಆರೋಪ

Vishwanath S
Updated On : 7 Nov 2013, 11:19 am

ಗದಗ: ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಪಪೂ ಮಹಾವಿದ್ಯಾಲಯಗಳಿಗೆ ಉಪನಿರ್ದೇಶಕ ಬಿ.ಎಸ್. ಗೌಡರ ಅನಾವಶ್ಯಕ ಕಿರುಕುಳದಿಂದ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಗೌರವಾಧ್ಯಕ್ಷ ಡಿ.ಎನ್. ಡಬಾಲಿ ಆರೋಪಿಸಿದರು. ಅವರು ಬುಧವಾರ ನಗರದ ವಿದ್ಯಾದಾನ ಸಮಿತಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿದ ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಉಪನಿರ್ದೇಶಕ ಬಿ.ಎಸ್. ಗೌಡರ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಿನಕ್ಕೊಂದು ಗೊಂದಲಕಾರಿ ಆದೇಶ ಹೊರಡಿಸುವ ಮೂಲಕ ದೈನಂದಿನ ಚಟುವಟಿಕೆಗೆ ಆತಂಕ ಉಂಟುಮಾಡಿದ್ದಾರೆ. ಸಿಬ್ಬಂದಿ ವೇತನ ಕಾಲಕಾಲಕ್ಕೆ ಸರಿಯಾಗಿ ಮಾಡದೇ ಇರುವುದು, ಶಿಕ್ಷಣ ಇಲಾಖೆಯ ನಿಯಮಗಳನ್ನು ಸರಿಯಾಗಿ ಪಪೂ ಕಾಲೇಜುಗಳಿಗೆ ತಿಳಿಸದೇ ಇರುವುದು, ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿ ತಾರತಮ್ಯ ನೀತಿ, ಸೇವಾ ಅವಧಿ ನಿರ್ದಿಷ್ಟಗೊಳಿಸದೇ ಇರುವುದು, ಸ್ಥಿರ ಠೇವಣಿ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಇರುವುದು, ನೋಂದಣಿ ನವೀಕರಣ ಮಾಡದೇ ಇರುವದು, ವಿದ್ಯಾರ್ಥಿಗಳ ಫೀ ಬಳಕೆಯ ಬಗ್ಗೆ ಸ್ಪಷ್ಟ ಮಾಹಿತಿ ಕೊಡದೇ ಇರುವುದು ಇಂತಹ ಹತ್ತು ಹಲವು ಸಮಸ್ಯೆಗಳನ್ನು ಹುಟ್ಟು ಹಾಕಿದ ಬಿ.ಎಸ್. ಗೌಡರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿತ್ಯ ಕಿರುಕುಳ ನೀಡುವುದೊಂದೇ ಅವರ ಏಕೈಕ ಉದ್ದೇಶವಾಗಿದೆ. ಬಿ.ಎಸ್. ಗೌಡರ ಅವರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ಹಲವು ದಶಕಗಳ ಕಾಲದಿಂದಲೂ ನಡೆದುಕೊಂಡ ಬಂದ ಪಪೂ ಕಾಲೇಜುಗಳಿಗೆ ಅನಾವಶ್ಯಕ ತೊಂದರೆ ಕೊಡುವುದು ಸರಿಯಲ್ಲ ಎಂದರು. ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ ಮಾತನಾಡಿ, ಪಪೂ ಉಪನಿರ್ದೇಶಕರು ಅನಾವಶ್ಯಕ ಕಿರುಕುಳ ನೀಡುವುದನ್ನು ಮುಂದುವರಿಸಿದಲ್ಲಿ ಉಸ್ತುವಾರಿ ಸಚಿವರ ಗಮನಕ್ಕೆ ತಂದು ವಿವಿಧ ಹಂತದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.  ಸಭೆಯಲ್ಲಿ ಕಾರ್ಯಾಧ್ಯಕ್ಷ ಗಣೇಶಸಿಂಗ್ ಬ್ಯಾಳಿ, ತಾಲೂಕು ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಸಹ ಕಾರ್ಯದರ್ಶಿ ಎಸ್.ಎಂ. ನರಗುಂದಕರ, ಎನ್.ಆರ್. ಕುಲಕರ್ಣಿ, ಎ.ಬಿ. ಬಡಿಗೇರ, ಮುಂತಾದವರು ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಡಾ. ಬಸವರಾಜ ಧಾರವಾಡ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement