ನಾಳೆ ಮುಂಡರಗಿಗೆ ಹೊರಟ್ಟಿ
ಗದಗ: ನ. 8, 9 ರಂದು ಮುಂಡರಗಿಗೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆಂದು ಮುಂಡರಗಿ ತಾಲೂಕು ಮಾದ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಬಿ.ಕೆ. ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನ. 8 ರಂದು ಬೆಳಗ್ಗೆ 10 ಗಂಟೆಗೆ ಅಡವಿಸೋಮಾಪುರದ ಸರ್ಕಾರಿ ಪ್ರೌಢಶಾಲೆ, 10.30ಕ್ಕೆ ಸರ್ಕಾರಿ ಪ್ರೌಢಶಾಲೆ ಕದಾಂಪುರ, 11 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಜಂತ್ಲಿ ಶಿರೂರ, 12 ಗಂಟೆಗೆ ಎಸ್.ಎಚ್.ಎಸ್. ಪ್ರೌಢಶಾಲೆ ಪೇಠಾಲೂರ, ಮಧ್ಯಾಹ್ನ 1 ಗಂಟೆಗೆ ಜೆ.ಜೆ.ಎಚ್.ಎಸ್. ಪ್ರೌಢಶಾಲೆ ಡಂಬಳ, 2 ಕ್ಕೆ ಕೆ.ಕೆ.ಎನ್.ಎಸ್. ಪ್ರೌಢಶಾಲೆ ಹಿರೇವಡ್ಡಟ್ಟಿ, 3 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಹಾರೋಗೇರಿ, 4 ಗಂಟೆಗೆ ಎಸ್.ಬಿ.ಎಚ್.ಎಸ್. ಪ್ರೌಢಶಾಲೆ ಬಾಗೇವಾಡಿ, 5 ಗಂಟೆಗೆ ಎಸ್.ಜಿ.ಎಂ. ಪ್ರೌಢಶಾಲೆ ಕಲಕೇರಿ, ನ. 9 ರಂದು ರಂದು ಬೆಳಗ್ಗೆ 8 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಮೆವುಂಡಿ, 9 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಬರದೂರ, 10 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಹೆಸರೂರ, 11 ಗಂಟೆಗೆ ಸರ್ಕಾರಿ ಪ್ರೌಢಶಾಲೆ ನಾವಳ್ಳಿ, ಮಧ್ಯಾಹ್ನ 12 ಗಂಟೆಗೆ ಮುಂಡರಗಿ ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘದ ಆಶ್ರಯದಲ್ಲಿ ನಡೆಯುವ ತಾಲೂಕು ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಡಾ. ಬಸವರಾಜ ಧಾರವಾಡ, ಎಸ್.ಟಿ. ಬ್ಯಾಕೋಡ, ಎಸ್.ಎಂ. ಹೊಸಮಠ, ಎಸ್.ಎಸ್. ಪಟ್ಟಣಶೆಟ್ಟಿ, ಎಂ.ಎಸ್. ಕೊಟಗಿ, ಎಂ.ಎಸ್. ಚಿನ್ನೂರ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಪ್ಲೋರಿನಾಬಾಯಿಗೆ ಸನ್ಮಾನ
ಗದಗ: ಹಿರಿಯ ರಂಗ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪ್ಲೋರಿನಾಬಾಯಿ ಅವರನ್ನು ಈಚೆಗೆ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಪ್ಲೋರಿನಾಬಾಯಿ ಅವರ ನಿವಾಸದಲ್ಲಿ ಸನ್ಮಾನಿಸಿದರು. ಗದಗ ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಕಿಶೋರಬಾಬು ನಾಗರಕಟ್ಟಿ ಮಾತನಾಡಿ, ಕೇವಲ 10 ವಯಸ್ಸಿನಿಂದಲೇ ರಂಗಭೂಮಿಗೆ ಪದಾರ್ಪಣೆ ಮಾಡಿದ ಪ್ಲೋರಿನಾಬಾಯಿಯವರು 6 ದಶಕಗಳಿಗೆ ಹೆಚ್ಚು ಕಾಲ ರಂಗಭೂಮಿಯಲ್ಲಿ ವಿವಿಧ ಪಾತ್ರಗಳಲ್ಲಿ ಮನಮುಟ್ಟುವಂತೆ ಅಭಿನಯಿಸಿ, ಪ್ರೇಕ್ಷಕರ ಮನಸೂರೆಗೊಂಡಿದ್ದಾರೆಂದು ಅವರ ರಂಗಭೂಮಿಯ ಸಾಧನೆಗಳನ್ನು ಸ್ಮರಿಸಿದರು. ಈ ಸೇವೆಗಾಗಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದು ಶ್ಲಾಘನೀಯ ಎಂದರು. ಕಸಾಪದ ತಾಲೂಕು ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ ಮಾತನಾಡಿ, ಕಲಾವಿದೆ ಪ್ಲೋರಿನಾಬಾಯಿಯವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ರಂಗಾಸಕ್ತರಿಗೆ, ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ಅತೀವ ಸಂತಸವನ್ನುಂಟುಮಾಡಿದೆ ಎಂದರು. ದತ್ತಪ್ರಸನ್ನ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪದ ತಾಲೂಕು ಖಜಾಂಚಿ ಬಿ.ಜಿ. ಹಿರೇಮಠ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಎಸ್. ಯತ್ನಟ್ಟಿ, ಎಸ್.ಐ. ಮೇಟಿ, ಲಯ ಕಲಾಮನೆ ಅಧ್ಯಕ್ಷ ಕಲಾವಿದ ಶಂಕರಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
12 ರಂದು ಕೆಡಿಪಿ ಸಭೆ
ಗದಗ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜಿಲ್ಲೆಯ ಪ್ರಗತಿ ಪರಿಶೀಲನೆಯ ತ್ರೈಮಾಸಿಕ ಸಭೆಯು ನ. 12 ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಜರುಗಲಿದೆ. ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಸಿಇಒ ವಿ.ಜಿ. ತುರಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಲಕರಿಗೆ ಶಿಸ್ತು, ಸಂಯಮ ಅವಶ್ಯ
ನರೇಗಲ್ಲ: ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗಲು ಪ್ರಮುಖ ಕಾರಣ ಮಿತಿಮೀರಿದ ವೇಗವಾದ ಚಾಲನೆ. ಇದನ್ನು ನಿಯಂತ್ರಿಸಿ ನಿಯಮಿತ ವೇಗದಲ್ಲಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದು ಎಂದು ರೋಣ ಸಿಪಿಐ ವೆಂಕಟಪ್ಪ ನಾಯಕ ತಿಳಿಸಿದರು. ಬುಧವಾರ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಆಟೋ, ಟಂಟಂ, ಟಾಟಾ ಏಸ್ ವಾಹನ ಚಾಲಕರಿಗಾಗಿ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಹನ ಚಾಲಕರಿಗೆ ಶಿಸ್ತು, ಸಂಯಮ, ಸಮಯ ಪ್ರಜ್ಞೆ ಅತ್ಯವಶ್ಯ. ಹಲವಾರು ಜೀವಗಳು ನಿಮ್ಮನ್ನು ನಂಬಿ ನಿಮ್ಮ ವಾಹನಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಅವರ ಜೀವ ಕಾಯುವುದು ನಿಮ್ಮೆಲ್ಲರ ಕರ್ತವ್ಯ. ಅದನ್ನು ಮರೆತು ಮಿತಿಮೀರಿ ಪ್ರಯಾಣಿಕರನ್ನು ತುಂಬಿ, ಕುಡಿದು ವಾಹನ ಓಡಿಸುವುದು ಶಿಕ್ಷಾರ್ಹ ಅಪರಾಧ. ಪದೇ ಪದೇ ತಪ್ಪು ಮಾಡಿದಲ್ಲಿ ಅಂತಹ ವಾಹನ ಚಾಲಕನ ಲೈಸನ್ಸ್‌ನ್ನು ಕಾಯಂ ಆಗಿ ರದ್ದುಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರೋಣ ಪಿಎಸ್‌ಐ ಡಿ.ಬಿ. ಪಾಟೀಲ, ಗಜೇಂದ್ರಗಡ ಪಿಎಸ್‌ಐ ಎಸ್.ಆರ್. ನಡಗಡ್ಡಿ, ನರೇಗಲ್ಲ ಪಿಎಸ್‌ಐ ಎನ್.ವಿ. ಬೇಲೂರ, ಎಎಸ್‌ಐ ಎಸ್.ವಿ. ಕುಲಕರ್ಣಿ, ಸಿ.ಎಂ. ಸಿಸ್ತಗಾರ, ಎಚ್.ಎಂ. ದಾಸರ, ಜಿ.ಡಿ. ಹುಲಿ, ಎಂ.ಎಸ್. ಭೂಸಗತ್ತಿ, ಪಿ.ಆರ್. ಹೊಂಬಳ, ಸ್ಥಳೀಯ ಟಂಟಂ, ಟಾಟಾ ಏಸ್, ಟ್ಯಾಕ್ಷಿ ಹಾಗೂ ವಿವಿಧ ವಾನಗಳ ಚಾಲಕರು ಭಾಗವಹಿಸಿದ್ದರು.