ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉಚಿತ ತರಬೇತಿ ಕಾರ್ಯಾಗಾರ

Vishwanath S
Updated On : 8 Nov 2013, 11:58 am

ಗದಗ: ನಿರುದ್ಯೋಗ ಹಿಂದುಳಿದ ವರ್ಗಗಳ ಯುವಕ, ಯುವತಿಯರಿಗೆ ಅಪರೇಲ್ ಟ್ರೈನಿಂಗ್ ಆಂಡ್ ಡಿಸೈನ್ ಸೆಂಟರ್ ಗದಗ, ಜಿಪಂ ಆಶ್ರಯದಲ್ಲಿ ತರಬೇತಿ ಸಂಸ್ಥೆಯ ಮೂಲಕ ಉಚಿತ ಹೊಲಿಗೆ, ಎಂಬ್ರೈಡರಿ ತರಬೇತಿ ಆಯೋಜಿಸಲಾಗಿದೆ. ಅಭ್ಯರ್ಥಿಗಳು ಕನಿಷ್ಠ 5ನೇ ತರಗತಿ ಪಾಸಾಗಿರಬೇಕು. 18ರಿಂದ 35 ವಯೋವಾನದವರಾಗಿರಬೇಕು. ವಾರ್ಷಿಕ ಆದಾಯ ರು. 40 ಸಾವಿರ ಮೀರಿರಬಾರದು ತರಬೇತಿ ನಂತರ ಕಡ್ಡಾಯವಾಗಿ ಕನಿಷ್ಠ 3 ತಿಂಗಳು ಸಿದ್ಧ ಉಡುಪು ಘಟಕದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಮಾಹಿತಿಗಾಗಿ ಅಪೇರಲ್ ಟ್ರೆನಿಂಗ್ ಆಂಡ್ ಡಿಸೈನ್ ಸೆಂಟರ್, ಶೆಡ್ ಸಂಖ್ಯೆ. 50-53, ಕೆಎಸ್‌ಟಿಐಡಿಸಿ, ಪವರ ಲೂಮ್ ಪಾರ್ಕ್, ನರಸಾಪುರ, ಬೆಟಗೇರಿ-ಗದಗ 582102 ದೂ. 08372-218602, ಮೊ. 9449121121, 9844751901, 9844236030 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಇಂದು ಶಾಖೆ ಆರಂಭ
ಗಜೇಂದ್ರಗಡ: ಸ್ಥಳೀಯ ನವನಗರ ಬಡಾವಣೆಯಲ್ಲಿ ಬಾದಾಮಿಯ ವಿಜಯಲಕ್ಷ್ಮೀ ಪತ್ತಿನ ಸಹಕಾರಿ ಸಂಘದ ಶಾಖೆ ನ. 8ರಂದು ಬೆಳಗ್ಗೆ 10.30ಕ್ಕೆ ಲಕ್ಕಲಕಟ್ಟಿಯವರ ಬಿಲ್ಡಿಂಗ್‌ನಲ್ಲಿ ಆರಂಭಗೊಳ್ಳಲಿದೆ. ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಶ್ರೀ ಸಾನ್ನಿಧ್ಯ ವಹಿಸುವರು. ಮಾಜಿ ಸಂಸದ ಆರ್.ಎಸ್. ಪಾಟೀಲ ಉದ್ಘಾಟಿಸುವರು. ಶಾಸಕ ಜಿ.ಎಸ್. ಪಾಟೀಲ ಗಣಕಯಂತ್ರ ವಿಭಾಗಕ್ಕೆ ಚಾಲನೆ ನೀಡುವರು. ಶಾಖೆ ಅಧ್ಯಕ್ಷ ಫಾರೂಕ್‌ಅಹ್ಮದ್ ದೊಡ್ಡಮನಿ ಅಧ್ಯಕ್ಷತೆ ವಹಿಸುವರು. ಕವಿತಾ ಜಾಲಿಹಾಳ, ಅಕ್ಕಮ್ಮ ಜಾನಾಯಿ, ನಾಯಕ ಶಿವರಾಜ ಘೋರ್ಪಡೆ ಪಾಲ್ಗೊಳ್ಳುವರು ಎಂದು ಶಾಖೆ ವ್ಯವಸ್ಥಾಪಕ ಪ್ರಸನ್ನ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement