ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಒಗ್ಗಟ್ಟಿನಿಂದ ಸರ್ವರ ಪ್ರಗತಿ: ಅಪ್ಪಣ್ಣ ಭಾರತಿ ಶ್ರೀ

Vishwanath S
Updated On : 8 Nov 2013, 11:57 am

ಗದಗ: ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳಿದರೆ ಸರ್ವರ ಪ್ರಗತಿ ಸಾಧ್ಯ ಎಂದು ಹಡಪದ ಅಪ್ಪಣ್ಣ ಭಾರತಿ ಶ್ರೀಗಳು ಸಮಾಜಕ್ಕೆ ಕರೆ ನೀಡಿದರು.
ಅವರು ಈಚೆಗೆ ನಗರದ ಮುಳಗುಂದ ನಾಕಾಬಳಿ ಗದಗ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಪ್ರಗತಿಗಾಗಿ ಪ್ರತಿಯೊಬ್ಬರೂ ಕಂಕಣ ಬದ್ಧರಾಗಿ ಸೇವಾ ಮನೋಭಾವದಿಂದ ದುಡಿಯಬೇಕು. ಸಮಾಜದ ಸೇವೆ ನೋವು, ನಲಿವಿನಲ್ಲಿ, ತಮ್ಮ ತನು-ಮನ-ಧನಕೊಟ್ಟು ಸಹಕರಿಸಿದ ಗೌರವಾಧ್ಯಕ್ಷ ಮೋಹನ ಚಂದಪ್ಪನವರ ಕಾರ್ಯ ಶ್ಲಾಘನೀಯ. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದರು.
ಸಂಘದ ಗೌರವಾಧ್ಯಕ್ಷ ಮೋಹನ ಚಂದಪ್ಪನವರ, ಕಷ್ಟದ ಕೆಲಸಗಳನ್ನು ಸುಲಭಗೊಳಿಸಲು ಸಂಘಟನೆಗಳು ಅತಿ ಅವಶ್ಯವಾಗಿ ಬೇಕು ಎಂದರು.
ಸಂಘದ ಅಧ್ಯಕ್ಷ ವಿ.ಬಿ. ಕೊಣ್ಣೂರ ಮಾತನಾಡಿ, ಸಮಾಜದ ಪ್ರಗತಿಗಾಗಿ ನಾನು ಸದಾ ಸಿದ್ಧ. ನಿಮ್ಮ ಸಹಾಯ, ಸಹಕಾರವನ್ನು ನಿರೀಕ್ಷಿಸುತ್ತೇನೆ. ನಾನು ಅಧ್ಯಕ್ಷನಾಗಿ ಈ ಸಮಾಜದ ಪ್ರಗತಿಯ ಸಲುವಾಗಿ ಹಗಲಿರುಳು ಶ್ರಮಿಸುತ್ತೇನೆ.
ಶ್ರೀನಿವಾಸ ಹಡಪದ, ಬಸವರಾಜ ಹಡಪದ, ದೇವು ಹಡಪದ, ಕಲ್ಲೇಶಪ್ಪ ಕೂಡಗುಂಟಿ, ನಾಗರಾಜ ಡಂಬಳ, ಚಂದ್ರಶೇಖರ ಹಡಪದ, ಗುರಪ್ಪ ಹುಲಕೋಟಿ, ರಾಮಚಂದ್ರಪ್ಪ ಲಾಯಗುಂದಿ, ಬಸವರಾಜ ಹಡಪದ, ಪರಶುರಾಮ ಹಡಪದ, ಮಂಜುನಾಥ ಹಡಪದ, ಶೇಖರಪ್ಪ ಹಡಪದ, ಸೋಮಣ್ಣ ಹಡಪದ, ವೀರಣ್ಣ ಹಡಪದ, ಮುತ್ತುರಾಜ ಹಡಪದ, ಗುರುನಾಥ ಹೊಸಮನಿ, ರಾಜಶೇಖರ ಕನ್ವೇಕರ ಇದ್ದರು. ಎ.ಬಿ. ಪ್ರಭು ಸ್ವಾಗತಿಸಿದರು. ಬಿ.ಬಿ. ಹಡಪದ ನಿರೂಪಿಸಿದರು. ಡಾ. ಫಕ್ಕೀರಪ್ಪ ನರೇಗಲ್ಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement