ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ವಸ್ತು ಪ್ರದರ್ಶನ

Vishwanath S
Updated On : 9 Nov 2013, 11:55 am

ಲಕ್ಷ್ಮೇಶ್ವರ: 2013-14ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ನ. 9ರ ಬೆಳಗ್ಗೆ 9 ಗಂಟೆಗೆ ಪಟ್ಟಣದ ಉಮಾ ವಿದ್ಯಾಲಯದ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆ. ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಶಾಸಕ ರಾಮಕೃಷ್ಣ ದೊಡ್ಡಮನಿ ನೆರವೇರಿಸುವರು. ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಪುರಸಭೆ ಉಪಾಧ್ಯಕ್ಷ ಎಂ.ಆರ್. ಪಾಟೀಲ, ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ, ಉಪಾಧ್ಯಕ್ಷೆ ಶಾರದಾ ಕವಲೂರ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ, ಜಿಪಂ ಸದಸ್ಯ ಕಮಲವ್ವ ಸಜ್ಜನರ, ನಿರ್ಮಲಾ ಬರದೂರ, ಸುನಿತಾ ಹಳ್ಳೆಪ್ಪನವರ, ಶಿರಹಟ್ಟಿ ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಉಪಾಧ್ಯಕ್ಷೆ ಮೀನಾಕ್ಷಿ ತಳವಾರ, ಗದಗನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ, ಡೈಯಟ್‌ನ ಉಪನಿರ್ದೇಶಕ ಬಿ.ಆರ್. ರಘುವೀರ, ಮಾಜಿ ಶಾಸಕ ಎಸ್.ಎನ್. ಪಾಟೀಲ, ಗಂಗಣ್ಣ ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಹಾಗೂ ತಾಲೂಕಿನ ಎಲ್ಲ ತಾಪಂ, ಪುರಸಭೆ ಹಾಗೂ ಪಪಂನ ಸದಸ್ಯರು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹೆಬ್ಬಾಳದ ಶಿವಯೋಗೀಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಜಲ ಸಹಕಾರ ಎಂಬ ವಿಜ್ಞಾನ ನಾಟಕ ಪ್ರದರ್ಶನವಾಗಲಿದೆ ಎಂದು ಬಿಇಒ ಆರ್.ಎಸ್.ಬುರುಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಉಪನ್ಯಾಸ
ನರಗುಂದ:  ತಾಲೂಕಿನ ಶಿರೋಳ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ನ. 9 ರ ಬೆಳಗ್ಗೆ 10 ಗಂಟೆಗೆ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ, ದೊರೆಸ್ವಾಮಿ ವಿರಕ್ತಮಠ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜೋತ್ಸವದ ಅಂಗವಾಗಿ ಕನ್ನಡ ಜಾಗೃತಿ ಅಭಿಯಾನದ ನಿಮಿತ್ತ ಗ್ರಾಮೀಣ ಯುವಕರ ಸಮಸ್ಯೆ ಮತ್ತು ಸವಾಲುಗಳು ಕುರಿತು ಉಪನ್ಯಾಸ ನಡೆಯಲಿದೆ. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಬಸವಣ್ಣೆವ್ವ ವಸ್ತ್ರದ, ಬಸವರಾಜ ಕುಪ್ಪಸ್ತ, ಚಿದಾನಂದ ಹುಣಶೀಮರದ, ಶೇಖರಯ್ಯ ನಾಗಲೋಟಿಮಠ, ಬಸವರಾಜ ಮೆಣಸಗಿ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಡಾ. ಬಿ.ಎಂ. ಜಾಬಣ್ಣವರ, ಬಿ.ಪಿ. ಶಿರಿಯಪ್ಪಗೌಡರ, ಶಿವಾನಂದ ಶೇಬಣ್ಣವರ, ಡಾ. ಶರಣಬಸವ ವೆಂಕಟಾಪುರ, ಕೆ. ಸಂಕಪ್ಪ, ಬಾಪುಗೌಡ ತಿಮ್ಮನಗೌಡ್ರ ಮುಂತಾದವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಕ್ರೀಡಾಕೂಟಕ್ಕೆ ಆಯ್ಕೆ
ನರೇಗಲ್ಲ:  ನ. 9 ರಿಂದ 12 ರವರೆಗೆ ಹೊಸಪೇಟೆಯಲ್ಲಿ ನಡೆಯುವ 10ನೇ ರಾಷ್ಟ್ರಮಟ್ಟದ ಜ್ಯೂನಿಯರ್ ಜಂರ್‌ರೋಪ್ ಕ್ರೀಡಾಕೂಟಕ್ಕೆ ಸ್ಥಳೀಯ ಹಠಯೋಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಕ್ರೀಡಾಪಟು ತೇಜಶ್ವಿನಿ ಕುಂಬಾರ ಹಾಗೂ ಪೂರ್ಣಿಮಾ ಅಕ್ಕಿ ಆಯ್ಕೆಯಾಗಿದ್ದಾರೆ. ಈ ಮಕ್ಕಳಿಗೆ ತರಬೇತಿ ನೀಡಿದ ಶಿಕ್ಷಕ ವಿ.ಎ. ಕುಂಬಾರ, ಬಸವರಾಜ ಸಿದ್ನೇಕೊಪ್ಪ ಹಾಗೂ ಸಾಧನೆ ಮಾಡಿದ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷ ಅಶೋಕ ಬೇವಿನಕಟ್ಟಿ, ಉಪಾಧ್ಯಕ್ಷ ಶಿವು ಮುಗಳಿ, ಕಾರ್ಯದರ್ಶಿ ಎನ್.ಕೆ. ಬೇವಿನಕಟ್ಟಿ, ಖಜಾಂಚಿ ಮಲ್ಲೇಶ ಬೆಡಗಲ್ಲ ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಚಿನ್ನಕ್ಕಾಗಿ ಮಹಿಳೆ ಕೊಲೆ: ಆರೋಪಿ ಬಂಧನ
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಹೊರವಲಯದ ಗುಡ್ಡದ ಪ್ರದೇಶದಲ್ಲಿ ಕಳೆದ ಬುಧವಾರ ಬೆಳಗ್ಗೆ ನಡೆದಿದ್ದ ಮಹಿಳೆಯ ಕೊಲೆ ಆರೋಪಿಯನ್ನು ಗುರುವಾರ ನಸುಕಿನ ಜಾವಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಕೇರಿ ಗ್ರಾಮದ ದಾವಲಬಿ ಹುಸೇನಸಾಬ್ ವಡ್ಡಟ್ಟಿ (50) ಎಂಬುವರನ್ನು ಬಂಗಾರದ ಮೇಲಿನ ಆಸೆಗಾಗಿ ಇದೇ ಗ್ರಾಮದ ತಿಮ್ಮಪ್ಪ ಸೋಮಲಿಂಗಪ್ಪ ಹುಳಕಣ್ಣವರ ಕೊಲೆಗೈದಿದ್ದಾರೆ ಎಂಬ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಕೊಲೆಯಾದ ಮಹಿಳೆ ಹೊಲಕ್ಕೆ ಹೋಗುವ ಮುಂಚಿತವಾಗಿ ತಿಮ್ಮಪ್ಪನಿಗೆ ಶೇಂಗಾ ಬಳ್ಳಿ ಹೇರಿಕೊಂಡು ಬರಲು ಟ್ರ್ಯಾಕ್ಟರ್ ಬೇಕು ಅಂತಾ ಕೇಳಲು ಹೋದಾಗ ತಾನು ಒಬ್ಬಳೆ ಹೊಲಕ್ಕೆ ಹೋಗುವುದಾಗಿ ಹೇಳಿ ತನ್ನ ಹೊಲಕ್ಕೆ ಹೋಗಿದ್ದಳು. ಒಂಟಿಯಾಗಿ ಒಬ್ಬಳೆ ಹೊಲಕ್ಕೆ ಹೋಗುವುದನ್ನು ಅರಿತಿದ್ದ ತಿಮ್ಮಣ್ಣ ಹೊಲದಲ್ಲಿಯೇ ದಾವಲಬಿಯನ್ನು ಕತ್ತು ಹಿಸುಕಿ ಆಕೆಯ ಕಿವಿಯಲ್ಲಿದ್ದ ಬಂಗಾರದ ಓಲೆ ಹಾಗೂ ತಾಳಿಯ ಪದಕಗಳನ್ನು ಕಿತ್ತುಕೊಂಡು ಶವವನ್ನು ಗ್ರಾಮದಿಂದ ಸುಮಾರು 3 ಕಿ.ಮೀ. ದೂರದ ಗುಡ್ಡದಲ್ಲಿ ಬಿಸಾಕಿ ಹೋಗಿದ್ದಾನೆ. ಕದ್ದ ಬಂಗಾರವನ್ನು ಗ್ರಾಮದ ಸೈಯದ್‌ಬಾಷಾ ದರ್ಗಾದ ಹಿಂದೆ ನೆಲದಲ್ಲಿ ಮುಚ್ಚಿಟ್ಟಿರುವುದನ್ನು ಪೊಲೀಸರು ಪತ್ತೆಹಚ್ಚಿ ತಿಮ್ಮಪ್ಪನನ್ನು ಬಂಧಿಸಿದ್ದಾರೆ.
ಈ ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಮಾರ್ಗದರ್ಶನದಲ್ಲಿ ಡಿಎಸ್‌ಪಿ ವಿಜಯ ಡಂಬಳ ನೇತೃತ್ವದಲ್ಲಿ ಮುಂಡರಗಿ ಇನ್ಸಪೆಕ್ಟರ್ ಶ್ರೀಪಾದ ಜಲ್ದೆ, ಎಎಸ್‌ಐ ಬಿ.ಎಂ. ಪೂಜಾರ, ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿ ಜೆ.ಐ. ಬಚೇರಿ, ಎಲ್.ಎಚ್. ಲಮಾಣಿ, ಎಂ.ಎ. ಶೇಖ, ಎಂ.ಎಫ್. ಗೊಳಗೊಳಕಿ, ಕೆ.ಎಸ್. ಬಂಡಗಾರ, ಆರ್.ಎಂ. ಚನ್ನಶೆಟ್ಟಿ, ಆರ್.ಎಸ್. ಕಪ್ಪತ್ತನವರ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಬಹುಮಾನವನ್ನು ಪ್ರಕಟಿಸಿರುವುದಾಗಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement