ಕನ್ನಡ ಆರಾಧಿಸುವ ಪ್ರವೃತ್ತಿ ಬೆಳೆಯಲಿ
ಕನ್ನಡಪ್ರಭ ವಾರ್ತೆ, ಗದಗ, ನ. 8
ಕನ್ನಡಿಗರು ಸದಾ ಕನ್ನಡ ಮಾತೆಯನ್ನು ಆರಾಧಿಸುವ ಜತೆಗೆ ಕನ್ನಡ ಮಾತನಾಡಬೇಕು. ಜತೆಗೆ ಅನ್ಯ ಭಾಷೆಗೆ ಅವಮಾನ ಮಾಡಬಾರದು ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಹೇಳಿದರು.
ವೇದಿಕೆಯ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ 58ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದರು.
ವೇದಿಕೆ ರಾಜ್ಯ ಪ್ರಸಾರ ಸಮಿತಿ ಅಧ್ಯಕ್ಷ ನಿಸ್ಸಾರ್ ಅಹ್ಮದ್ ಖಾಜಿ, ಶಿವಬಸವ ಜನಕಲ್ಯಾಣ ಸಮಿತಿ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ರಾಜ್ಯಾಧ್ಯಕ್ಷ ಪಿ. ಸುಬ್ರಮಣ್ಯಂ ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಮಿಕ ಘಟಕದ ರಾಜ್ಯಾಧ್ಯಕ ಎಸ್.ಎಸ್. ರಡ್ಡೇರ, ರಾಜ್ಯ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಗಡಾದ, ರಾಮು ಬಳ್ಳಾರಿ, ಜೇಸುದಾಸ ಅಕ್ಬರ್ ಅಲಿ ಬೇಗ, ಪರಶುರಾಮ ಸಾತಪುತೆ, ಅಜಿತ ಹುಯಿಲಗೋಳ, ವಿ.ಆರ್. ಹಸನಟ್ಟಿ ಉಪಸ್ಥಿತರಿದ್ದರು. ಹಿರಿಯ ಕವಿ ಸಿ.ಜಿ.ಬಿ. ಹಿರೇಮಠ ಸ್ವಾಗತಿಸಿದರು. ರಾಜ್ಯ ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಗಡಾದ ವಂದಿಸಿದರು.