ಕನ್ನಡ ಭಾಷೆ ಬೆಳೆಸಿ: ತೋಂಟದ ಶ್ರೀ
ಮುಂಡರಗಿ: ಕನ್ನಡದಲ್ಲಿ ಲಕ್ಷಾಂತರ ವಚನಗಳನ್ನು ಬರೆಯುವ ಮೂಲಕ ಕನ್ನಡ ನಾಡು-ನುಡಿಗೆ ಆಯಾಮ ನೀಡಿದ ಕೀರ್ತಿ 12ನೇ ಶತಮಾನದ ವಚನ ಸಂಸ್ಕೃತಿಗೆ ಸಲ್ಲುತ್ತದೆ ಎಂದು ಡಂಬಳ-ಗದಗ ಸಂಸ್ಥಾನ ಮಠದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಪಟ್ಟಣದ ತೋಂಟದಾರ್ಯ ಮಠದಲ್ಲಿ ಬುಧವಾರ ರಾತ್ರಿ ಜರುಗಿದ 67ನೇ ತ್ರೈಮಾಸಿಕ ಶಿವಾನುಭ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗೆ ತಕ್ಕಂತೆ ಕನ್ನಡದಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಜನಮನ ತಲುಪಿಸಿದ ಕೀರ್ತಿಯೂ 12ನೇ ಶತಮಾನದ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ. ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನಮಾನವಿದೆ. ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡ ಬೆಳೆಸಬೇಕು ಎಂದರು.
ಹೂವಿನಹಡಗಲಿ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಡಾ.ಕೆ. ಸತೀಶ ಮಾತನಾಡಿ, ಕರ್ನಾಟಕ ಬಹು ವಿಶಾಲವಾದ ನಾಡು. ಇದು ತನ್ನದೇ ಆದ ಒಂದು ವಿಶೇಷ ಜನರನ್ನು ಬೆಳೆಸಿದೆ. ಕ್ರಿ.ಪೂ. ದಿಂದಲೂ ಕನ್ನಡಕ್ಕೆ ಇತಿಹಾಸವಿದೆ. 2 ಸಾವಿರ ವರ್ಷಗಳ ಪೂರ್ವದ ಇತಿಹಾಸವನ್ನು ಹೊಂದಿದ ನಾಡು ಕನ್ನಡನಾಡು. ಕನ್ನಡ ಸಾಹಿತ್ಯ ಪರಂಪರೆ ಅತಿ ದೊಡ್ಡ ಪರಂಪರೆಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಹಮ್ಮಿಗಿ ಜಿಪಂಗೆ ನೂತನವಾಗಿ ಆಯ್ಕೆಗೊಂಡ ಹೇಮಗಿರೀಶ ಹಾವಿನಾಳ, ಶ್ರೇಷ್ಠ ವರ್ತಕ ಪ್ರಶಸ್ತಿ ಪಡೆದ ಹೇಮಂತಗೌಡ ಪಾಟೀಲ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎ. ಹಿರೇಮಠ ಹಾಗೂ ಭಕ್ತಿ ಸೇವೆ ವಹಿಸಿದ್ದ ಶಿವಕುಮಾರ ಈಶ್ವರಪ್ಪ ಬೆಟಗೇರಿ ಹಾಗೂ ಕುಟುಂಬದವರನ್ನು ಶ್ರೀಗಳು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಹೇಮಗಿರೀಶ ಹಾವಿನಾಳ, ಹೇಮಂತಗೌಡ ಪಾಟೀಲ, ಕೆ.ಎ. ಹಿರೇಮಠ ಮಾತನಾಡಿದರು.
ಸೇವಾ ಸಮಿತಿ ಅಧ್ಯಕ್ಷ ಈಶಣ್ಣ ಬೆಟಗೇರಿ, ಅಧ್ಯಕ್ಷ ಧ್ರುವಕುಮಾರ ಹೊಸಮನಿ, ಉಪಾಧ್ಯಕ್ಷ ಡಿ.ಡಿ. ಮೋರನಾಳ, ಪಾಲಾಕ್ಷಿ ಗಣದಿನ್ನಿ, ನಾಗೇಶ ಹುಬ್ಬಳ್ಳಿ, ಸೊಲಬಣ್ಣ ಜೋಬಾಳಿ, ಕೊಟ್ರಯ್ಯ ಅಮರಗೋಳ ಹಿರೇಮಠ, ಗೌತಮಚಂದ್ ಚೋಪ್ರಾ, ಬಸವಂತಪ್ಪ ಮುದ್ದಿ, ದೇವಪ್ಪ ಬಾರಕೇರ, ದೇವಪ್ಪ ರಾಮೇನಹಳ್ಳಿ, ಲಿಂಗರಾಜಗೌಡ ಪಾಟೀಲ, ಮುದಿಯಪ್ಪ
ಕುಂಬಾರ, ವೀರೇಶ ಸಜ್ಜನರ, ಬಸವರಾಜ ರಾಮೇನಹಳ್ಳಿ, ಚಂದ್ರಶೇಖರ ಬಡಿಗೇರ, ಎ.ಪಿ. ದಂಡೀನ, ರಾಘವೇಂದ್ರ ಕುರಿ, ರಾಮು ಭಜಂತ್ರಿ, ಅಬ್ದುಲ್ ಹಣಗಿ, ಎ.ಕೆ. ಮುಲ್ಲಾನವರ, ಮಂಜುನಾಥ ಮುಧೋಳ ಮುಂತಾದವರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಸ್ವಾಗತಿಸಿದರು. ಗಿರೀಶಗೌಡ ಪಾಟೀಲ ನಿರೂಪಿಸಿ, ವಂದಿಸಿದರು.