ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿಧಾನಸಭಾ ಕ್ಷೇತ್ರಗಳ ಮತದಾರರ ಯಾದಿ ಪರಿಷ್ಕರಣೆ

Vishwanath S
Updated On : 9 Nov 2013, 11:55 am

ಗದಗ:  ವಿಧಾನಸಭಾ ಕ್ಷೇತ್ರಗಳ ಮತದಾರರ ಯಾದಿ ಪರಿಷ್ಕರಿಸಲು 01-01-2014 ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಭಾರತ ಚುನಾವಣಾ ಆಯೋಗವು ವೇಳಾ ಪಟ್ಟಿಯನ್ನು ಹೊರಡಿಸಿದೆ. ಇದರ ಅನ್ವಯ ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ 65-ಶಿರಹಟ್ಟಿ (ಪಜಾ), 66-ಗದಗ, 67-ರೋಣ ಮತ್ತು 68-ನರಗುಂದ ಇವುಗಳ ಮತದಾರರ ಕರಡು ಯಾದಿಗಳನ್ನು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಹಸೀಲ್ದಾರ್ ಕಚೇರಿಗಳಲ್ಲಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ
ವೆಬ್‌ಸೈಟ್ ಢಿಢಿಢಿ.್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿ ಇದರಲ್ಲಿ ಪ್ರಕಟಿಸಲಾಗಿದೆ. ಈ ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ನ. 29ರ ವರೆಗೆ ಸ್ವೀಕರಿಸಲಾಗುವುದು. 01-01-2014ಕ್ಕೆ ಇರುವಂತೆ 18 ವರ್ಷ ಮೇಲ್ಪಟ್ಟ ವಯಸ್ಸು ಹೊಂದಿದ್ದು, ಮತದಾರರ ಯಾದಿಗಳಲ್ಲಿ ಹೆಸರು ಇಲ್ಲದವರು ನಿಗದಿತ ನಮೂನೆ ನಂ. 6 ರಲ್ಲಿ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತಗಟ್ಟೆ ಅಧಿಕಾರಿಗಳಿಗೆ (ಇಔಕ) ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮತದಾರ ನೋಂದಣಾಧಿಕಾರಿ ಉಪವಿಭಾಗಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಸಂಬಂಧಿತ ತಾಲೂಕಿನ ತಹಸೀಲ್ದಾರರಿಗೂ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಗೆ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಪೋಟೋ ಅಂಟಿಸಬೇಕು. ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ನಮೂನೆ 7ರಲ್ಲಿ ಯಾದಿಯಲ್ಲಿ ಇರುವ ಹೆಸರು ಹಾಗೂ ವಿವರಗಳಲ್ಲಿ ದೋಷಗಳಿದ್ದಲ್ಲಿ ನಮೂನೆ 8ರಲ್ಲಿ ಮತ್ತು ಒಂದೇ ವಿಧಾನ ಸಭಾಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಮತದಾರರು ಸ್ಥಳಾಂತರವಾಗಿದ್ದಲ್ಲಿ ಹೆಸರುಗಳ ವರ್ಗಾವಣೆಗೆ ನಮೂನೆ 8ಎ ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನ. 5 ರಿಂದ 8 ರವರೆಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಸಂಬಂಧಪಟ್ಟ ಬಿಎಲ್‌ಓಗಳು ಆಯಾ ಮತಗಟ್ಟೆ ಪ್ರದೇಶಗಳಲ್ಲಿ ಮತದಾರ ಪಟ್ಟಿಗಳೊಂದಿಗೆ ತೆರಳಿ ಸಂಬಂಧಪಟ್ಟ ಗ್ರಾಮಗಳ ಗ್ರಾಮಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಮತದಾರ ಪಟ್ಟಿಗಳ ಓದಿ ತಿಳಿಸಲು ಸೂಚಿಸಲಾಗಿದೆ. ಅಲ್ಲದೆ ವಿಶೇಷ ಕಾರ್ಯಾಚರಣೆಯ ದಿನಗಳಾಗಿ ನ. 10 ಹಾಗೂ 17ರ ಭಾನುವಾರಗಳಂದು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ನೇಮಿಸಿದ ಪ್ರತಿನಿಧಿಗಳು (ಇಔಆ) ಆಯಾ ಪ್ರದೇಶದಲ್ಲಿ ಹಾಜರಿದ್ದು, ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಬಿಟ್ಟು ಬಿಡುತಕ್ಕವುಗಳು, ತಿದ್ದುಪಡಿ ಹಾಗೂ ಸ್ಥಳಾಂತರ ಮುಂತಾದ ಕಾರ್ಯಗಳಿಗೆ ಬಿಎಲ್‌ಒಗಳಿಗೆ ಸಹಕರಿಸಲು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement