ಸಂಗೀತಗಾರರನ್ನು ಪ್ರೋತ್ಸಾಹಿಸಿ: ವಿರೂಪಾಕ್ಷ ಶ್ರೀ
ಗದಗ: ಸಂಗೀತಗಾರರನ್ನು ಪ್ರೋತ್ಸಾಹಿಸುವ ಕೆಲಸ ಇನ್ನಷ್ಟು ಹೆಚ್ಚಾಗಬೇಕು ಎಂದು ವಿರೂಪಾಕ್ಷ ಮಹಾಸ್ವಾಮೀಜಿ ಹೇಳಿದರು.
ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ವರವಿ ಸಂಯುಕ್ತಾಶ್ರಯದಲ್ಲಿ ವರವಿಯಲ್ಲಿ ಜರುಗಿದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾಳಪ್ಪ ಪತ್ತಾರ ಮಾತನಾಡಿ, ವಿಶ್ವಬ್ರಾಹ್ಮಣಾನುಭವ ಗೋಷ್ಠಿ ಎಲ್ಲರಿಗೂ ಅಮೃತವನ್ನು ತರುವಂತಹದ್ದಾಗಿದೆ.
ಇಂತಹ ಗೋಷ್ಠಿಗಳು ಮೇಲಿಂದ ಮೇಲೆ ಜರುಗುವುದರಿಂದ ವ್ಯಕ್ತಿತ್ವ ವಿಕಾಸನದ ಜತೆಗೆ, ಆಧ್ಯಾತ್ಮಿಕ ವಿಕಾಸನ ಪ್ರಗತಿ ಪರಚಿಂತನ ಮತ್ತು ಸಾಮಾಜಿಕ ಸಂಹಿಷ್ಣುತೆಯನ್ನು ಕಾಣಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಸುತಾರ ಕುಟುಂಬದ ಸದಸ್ಯರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು. ವರವಿಯ ಮೌನೇಶ್ವರ ಸ್ವಾಮೀಜಿ, ಆರ್.ಸಿ. ಸಂಶಿ ಮುಂತಾದವರು ಹಾಜರಿದ್ದರು.
ಧನ್ಯಾ, ಪ್ರತಿಮಾ ಪ್ರಾರ್ಥಿಸಿದರು. ವೀರಣ್ಣ ಪತ್ತಾರ ನಿರೂಪಿಸಿದರು.