ಶಂಕರನಾಗ ಹುಟ್ಟುಹಬ್ಬ ಆಚರಣೆ
ಗಜೇಂದ್ರಗಡ: ಸ್ಥಳೀಯ ಮೈಸೂರ ಮಠ ಮುಂಭಾಗದಲ್ಲಿ ಶಂಕರನಾಗ್ ಅಭಿಮಾನಿ ಸಂಘ ವತಿಯಿಂದ ನಟ ಶಂಕರನಾಗ ಅವರ 59ನೇ ಹುಟ್ಟುಹಬ್ಬವನ್ನು ಶನಿವಾರ ಶಂಕರನಾಗ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಶಂಕರನಾಗ ಅಭಿಮಾನಿ ಸಂಘದ ಮುಖಂಡ ರಿಯಾಜ್ ಮೋಮಿನ್ ಮಾತನಾಡಿ, ಕನ್ನಡ ಚಿತ್ರರಂಗ ಕಂಡ ಅತ್ಯಂತ ಕ್ರೀಯಾಶೀಲ ಹಾಗೂ ಅಭಿನಯ ಚತುರ ಎನಿಸಿಕೊಂಡು ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ತಾರೆಯಾಗಿದ್ದರು ಎಂದರು. ಅವರು ಕನ್ನಡ ಕಲಾರಂಗಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು. ಇದೇ ಸಂದರ್ಭದಲ್ಲಿ ನೆಚ್ಚಿನ ನಟನ ಹುಟ್ಟು ಹಬ್ಬದ ಪ್ರಯುಕ್ತ ಶಿವ ಕಾಲಕಾಲೇಶ್ವರ ಅಟೋರಿಕ್ಷಾ ಸಂಘ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಟೋರಿಕ್ಷಾ ಮೇಲೆ ಶಂಕರನಾಗ ಅವರ ಭಾವಚಿತ್ರ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ರಜಾಕ ಡಾಲಾಯತ್, ಮಹಾಂತೇಶ ಪವಾರ, ಮಂಜುನಾಥ ತಳವಾರ, ಕನಕಪ್ಪ ಅರಳಿಗಿಡದ, ಪ್ರಕಾಶ ಅಂಬೋರೆ ವಿರೂಪಾಕ್ಷಪ್ಪ ಶೆಟ್ಟರ್, ಎಸ್.ಕೆ. ಹೂಗಾರ, ರಫೀಕ ಕರ್ನಾಚಿ ಮುಂತಾದವರು ಉಪಸ್ಥಿತರಿದ್ದರು.