ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಹಸ್ರಾರ್ಜುನ ಜಯಂತಿ: ಮೆರವಣಿಗೆ

Lingaraj Badiger
Updated On : 11 Nov 2013, 12:17 pm

ಕನ್ನಡಪ್ರಭ ವಾರ್ತೆ, ಮುಂಡರಗಿ, ನ 10
ದೇಶದ ರಕ್ಷಣೆಯಲ್ಲಿ ಸಹಸ್ರಾರ್ಜುನರ ಪಾತ್ರ ದೊಡ್ಡದು. ಸಹಸ್ರಾರ್ಜುನ ಮಹಾರಾಜರು ದುಷ್ಟರ ಸಂಹಾರಕ, ಶಿಷ್ಟರ ಪರಿಪಾಲಕರಾಗಿದ್ದರು. ಅವರು ಒಂದೇ ಜಾತಿ, ಜನಾಂಗಕ್ಕೆ ಸೀಮಿತರಾಗಿರಲಿಲ್ಲ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಶನಿವಾರ ಮುಂಡರಗಿ ಪಟ್ಟಣದಲ್ಲಿ ಎಸ್‌ಎಸ್‌ಕೆ ಸಮಾಜದವರು ಸಹಸ್ರಾರ್ಜುನ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಸಹಸ್ರಾರ್ಜುನರು ಎಲ್ಲ ಜನಾಂಗದ ಏಳಿಗೆಗಾಗಿ ಕೆಲಸ ಮಾಡಿದವರು. ಅವರ ತತ್ವಾದರ್ಶಗಳನ್ನು ಇಂದಿನ ಯುವಕರು ಪಾಲಿಸಬೇಕು ಎಂದರು. ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಅಶೋಕ ಶಿದ್ಲಿಂಗ್, ಪತ್ರಕರ್ತ ದಿಲೀಪಕುಮಾರ ಜೋಶಿ ಮಾತನಾಡಿದರು.
ಅಶೋಕ ಶಿದ್ಲಿಂಗ, ಬಿ.ಟಿ. ಹಾದಿಮನಿ, ಸ್ವಾಮಿಸಾ ಪವಾರ, ರಮೇಶ ಪವಾರ, ಡಿ.ಜಿ. ಮಗಜಿ, ಗಣೇಶ ಮಗಜಿ, ಭೀಮಸಿಂಗ್ ಬೇಚಗೇರಿ, ಪಾಂಡೂಸಾ ಬಸವಾ, ಸಂಕರಸಾ ಬಾಕಳೆ, ಎಸ್.ಡಿ. ಕಲಬುರ್ಗಿ, ಉಮಾಬಾಯಿ ಬಾಕಳೆ, ರೇಣುಕಾಬಾಯಿ ಹಾದಿಮನಿ, ಲಲಿತಾ ಶಿದ್ಲಿಂಗ ಹಾಗೂ ತರುಣ ಮಿತ್ರ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದ ಮೆರವಣಿಗೆ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement