ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನರೇಂದ್ರ ಮೋದಿ ರ್ಯಾಲಿ ಬೆಂಬಲಿಸಿ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

Lingaraj Badiger
Updated On : 13 Nov 2013, 10:48 am

ಕನ್ನಡಪ್ರಭ ವಾರ್ತೆ, ಗದಗ, ನ. 12
ರಾಜ್ಯದಲ್ಲಿ ಬಿಜೆಪಿಯ ಬೃಹತ್ ಶಕ್ತಿ ಪ್ರದರ್ಶನವೆಂದೇ ಪರಿಗಣಿಸಲಾಗುತ್ತಿರುವ ನರೇಂದ್ರ ಮೋದಿಯವರ ಬೆಂಗಳೂರಿನಲ್ಲಿ ನಡೆಯುತ್ತಿರುವ ರ್ಯಾಲಿಗಾಗಿ ಜನತೆಯ ಗಮನ ಸೆಳೆಯಲು ಗದಗ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಮಂಗಳವಾರ ಬೃಹತ್ ಬೈಕ್‌ರ್ಯಾಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ದೇಶದ ಭವಿಷ್ಯದ ಆಶಾಕಿರಣವಾಗಿರುವ ನರೇಂದ್ರ ಮೋದಿ ಅವರ ರ್ಯಾಲಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಸಹಾಯಕವಾಗಲಿದ್ದು, ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹಾಗೂ ಬಲ ತುಂಬಲಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನ. 17 ರಂದು ನಡೆಯಲಿರುವ ರ್ಯಾಲಿಗೆ ಜಿಲ್ಲೆಯಿಂದ 5 ಸಾವಿರ ಯುವ ಕಾರ್ಯಕರ್ತರು ತೆರಳಲಿದ್ದಾರೆ ಎಂದರು.
ಗಾಂಧಿವೃತ್ತದಿಂದ ಪ್ರಾರಂಭವಾದ ಬೈಕ್‌ರ್ಯಾಲಿಯು ಬೆಟಗೇರಿಯ ಟೆಂಗಿನಕಾಯಿ ಬಜಾರ್, ಹಾತಲಗೇರಿ ನಾಕಾ, ಕೆ.ಸಿ. ರಾಣಿ ವೃತ್ತ, ಜ. ತೋಂಟದಾರ್ಯ ಮಠ, ಮಹೇಂದ್ರಕರ ವೃತ್ತ, ಟಾಂಗಾಕೂಟ, ದೊಡ್ಡ ಗಡಿಯಾರ, ಜೋಡಮಾರುತಿ ದೇವಸ್ಥಾನದ ಮೂಲಕ ಹಾಯ್ದು ಮುಳಗುಂದ ನಾಕಾಕ್ಕೆ ಮುಕ್ತಾಯವಾಯಿತು.
ಬೈಕ್‌ರ್ಯಾಲಿಯಲ್ಲಿ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಚಗನ್ನರಾಜ ಪುರೋಹಿತ, ತೊಂಟೋಸಾ ಬಾಂಡಗೆ, ಕಾಂತಿಲಾಲ ಬನ್ಸಾಲಿ, ಎಂ.ಎಂ. ಹಿರೇಮಠ, ಮಾಧವ ಬನ್ಸಾಲಿ, ಲಿಂಗನಗೌಡ ಹರ್ತಿ, ನಂದೀಶ ಮಠದ, ಜಗನ್ನಾಥಸಾ ಭಾಂಡಗೆ, ಶ್ರೀನಿವಾಸ ಭಾಂಡಗೆ, ದಶರಥ ಕೊಳ್ಳಿ, ಸಿದ್ಧರಾಮೇಶ ಹಿರೇಮಠ, ಸುರೇಶ ಚಿತ್ತರಗಿ, ಸುಭಾಸ ಸುಂಕದ ಸೇರಿದಂತೆ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement