ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೆಮ್ಮದಿ ಬದುಕಿಗೆ ಹಾಸ್ಯ ಅವಶ್ಯ

Lingaraj Badiger
Updated On : 13 Nov 2013, 10:53 am

 ಗದಗ: ನೆಮ್ಮದಿಯ ಬದುಕಿಗೆ ಹಾಸ್ಯ ಟಾನಿಕ್ ಇದ್ದಂತೆ, ನಗೆ ಬದುಕಿಗೆ ಚೈತನ್ಯ ನೀಡುವ ಸಂಜೀವಿನಿ ಎಂದು ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ವಿ. ಬಡಿಗೇರ ಅಭಿಪ್ರಾಯಪಟ್ಟರು.
ಅವರು ನಗರದಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ಶುಕ್ರವಾರ ಅಕ್ಕನ ಬಳಗ ಏರ್ಪಡಿಸಿದ್ದ ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಕುರಿತು ಉಪನ್ಯಾಸ ನೀಡಿದರು.
ಜೀವನದ ಅನುಭವಗಳನ್ನು ಚುಟುಕುಗಳನ್ನಾಗಿ ಕಟ್ಟಿದವರು ಮಹಿಳೆಯರು. ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರ. ಸಾಹಿತ್ಯ ಪ್ರಕಾರದ ವಿವಿಧ ಮಗ್ಗಲುಗಳನ್ನು ಬಲ್ಲ ಕವಿ ಅನುಭವಿ ಖನಿಯಾಗಿದ್ದು ಆತನ ಕಾವ್ಯಗುಣ, ಸಾಹಿತ್ಯವನ್ನು ಸೃಜನಶೀಲತೆಯ ಮನಸ್ಸುಗಳು ವೈಚಾರಿಕ ದೃಷ್ಟಿಕೋನದಿಂದ ನೋಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡರ ಮಾತನಾಡಿ, ನಮ್ಮ ನಿತ್ಯದ ಬದುಕಿನಲ್ಲಿ ಹಾಸ್ಯವು ಹಾಸುಹೊಕ್ಕಾಗಿದೆ. ನಮಗೆ ತಿಳಿಯದಂತೆಯೇ ಹಲವಾರು ಘಟನೆಗಳು ಹಾಸ್ಯದ ಹೊನಲನ್ನು ಹರಿಸಿವೆ. ಹಾಸ್ಯ ಆಯುಷ್ಯವನ್ನು ವೃದ್ಧಿಸುವುದು ಎಂದರು. ಈ ಸಂದರ್ಭದಲ್ಲಿ ಶಾಂತಾದೇವಿ ಕಲ್ಲೂಳಗಿ, ಕುಸುಮಾದೇವಿ ಮಾಳೆಕೊಪ್ಪಮಠ, ವಿ.ಆರ್. ಮಾಳೆಕೊಪ್ಪಮಠ ಹಾಗೂ ಅಕ್ಕನ ಬಳಗದ ಸದಸ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಕ್ಕನ ಬಳಗದ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಸ್ತೂರಿ ಹಿರೇಗೌಡರ ಸ್ವಾಗತಿಸಿದರು. ಸುನಂದಾ ಮಾಳೆಕೊಪ್ಪಮಠ ಪರಿಚಯಿಸಿದರು. ಕಾರ್ಯದರ್ಶಿ ಮೀನಾಕ್ಷಿ ಸಜ್ಜನರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement