ವಿದ್ಯಾರ್ಥಿಗಳಿಗೆ ಉಚಿತ ಸ್ವೆಟರ್ ವಿತರಣೆ
ಮುಂಡರಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಓದಿನೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ನಿಮ್ಮ ಬಾಳನ್ನು ಬಂಗಾರ ಮಾಡಿಕೊಳ್ಳಬೇಕು ಎಂದು ನಿವೃತ್ತ ತಹಸೀಲ್ದಾರ್ ಭಗವಾನ್ ಗುಪ್ತಾ ಹೇಳಿದರು.
ಅವರು ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿನ ತ್ರಿವಳಿ ಶಾಲೆಗಳ 1 ರಿಂದ 3ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶನಿವಾರ ಸಂಜೆ ಉಚಿತವಾಗಿ ಸ್ವೆಟರ್ (ಉಣ್ಣೆ ಅಂಗಿ) ವಿತರಿಸಿ ಮಾತನಾಡಿದರು. ಸರ್ಕಾರ ಇಂದು ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುತ್ತಿದ್ದು, ಶಾಲೆಗಳಲ್ಲಿರುವ ಗ್ರಂಥಾಲಯಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಅಲ್ಲಿನ ಪುಸ್ತಕಗಳ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಯುವಕರು ಶಿಕ್ಷಣವಂತರಾಗಿ ವಿವಿಧ ದೊಡ್ಡ ಹುದ್ದೆಗಳನ್ನು ಅಲಂಕರಿಸುವ ಮೂಲಕ ಈ ಭಾಗದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದರು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಭಗವಾನ್ ಗುಪ್ತಾ ಅವರು 1975ರಲ್ಲಿ ತಹಸೀಲ್ದಾರ್‌ರಾಗಿ ಮುಂಡರಗಿ ತಾಲೂಕಿನಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಹಮ್ಮಿಗಿ ರಾಮದೇವರ ದೇವಸ್ಥಾನದ ನೆನಪು ಹಾಗೂ ಇಲ್ಲಿನ ಜನತೆಯೊಂದಿಗೆ ಹೊಂದಿದ್ದ ನಂಟನ್ನು ಮರೆಯದೇ ಇದೀಗ ಇಲ್ಲಿನ ಮಕ್ಕಳಿಗೆ ಚಳಿಗಾಲದಲ್ಲಿ ಅನುಕೂಲವಾಗುವ ಸ್ವೆಟರ್‌ನ್ನು ಉಚಿತವಾಗಿ ನೀಡಿರುವುದು ಸಂತಸದ ಸಂಗತಿ ಎಂದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಗುಪ್ತಾ ಅವರ ಕಾರ್ಯ ಮೆಚ್ಚುವಂತದ್ದು ಎಂದರು. ಗ್ರಾಪಂ ಅಧ್ಯಕ್ಷೆ ಸಾವಿತ್ರವ್ವ ತಳವಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ರಾಮಾಂಜನೇಯರಾಜು ಪೆನ್‌ಮತ್ಸ್, ಇಸ್ಮಾಯಿಲ್‌ಖಾನ್ ತಂಬ್ರಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಕರಿಯಪ್ಪ ಹಡಗಲಿ, ಸದಸ್ಯೆ ಪ್ರಭಾವತಿ ಯಲಿಗಾರ, ಮಾಬೂಬಿ ಜವಳಿ, ವೇದಮೂರ್ತಿ ಜೋಗಿನ್, ಈರಣ್ಣ ಭಜಂತ್ರಿ, ಮುಂತಾದವರು ಉಪಸ್ಥಿತರಿದ್ದರು. ಬಿಇಒ ಎಂ.ಎ. ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ನರೇಗಲ್ ಸ್ವಾಗತಿಸಿದರು. ಶಿಕ್ಷಕ ಲಮಾಣಿ ನಿರೂಪಿಸಿದರು. ಎಸ್.ಬಿ. ಹಾಲವರ್ ವಂದಿಸಿದರು.