ಇಂದು ಸುಧಾರಣಾ ದಿನ
ಕನ್ನಡಪ್ರಭ ವಾರ್ತೆ, ಗದಗ, ನ. 13
60ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರಿ ಯೂನಿಯನ್ ಗದಗ, ಸಹಕಾರ ಇಲಾಖೆ ಗದಗ, ಕೆಸಿಸಿ ಬ್ಯಾಂಕ್ ಧಾರವಾಡ, ಕೆ.ಎಂ.ಎಫ್. ಧಾರವಾಡ-ಗದಗ ವಿಭಾಗ, ಯಂಗ್ ಇಂಡಿಯಾ ಕೋ-ಆಪ್ ಕ್ರೆಡಿಟ್ ಸೊಸೈಟಿ ಗದಗ ಹಾಗೂ ಗದಗ ತಾಲೂಕಿನ ಎಲ್ಲ ಸಹಕಾರ ಸಂಘಗಳ ಆಶ್ರಯದಲ್ಲಿ ನ. 14ರ ಬೆಳಗ್ಗೆ 11.30 ಗಂಟೆಗೆ ನಗರದ ಯಂಗ್ಇಂಡಿಯಾ ಕೋ-ಆಪ್-ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಸಹಕಾರಿ ಆಡಳಿತ ನಾಯಕತ್ವ ಮತ್ತು ಸುಧಾರಣಾ ದಿನದ ಉದ್ಘಾಟನೆ ಜರುಗಲಿದೆ. ಗಂಗಾಪುರದ ಮೃಡಗಿರಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಉದ್ಘಾಟಿಸುವರು. ಯಂಗ್ ಇಂಡಿಯಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ವಿ.ಆರ್. ಗೋವಿಂದಗೌಡ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಧಾರವಾಡದ ಕೆಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಫ್. ಕಲಗುಡಿ, ಸಿ.ಕೆ. ಮಾಳಶೆಟ್ಟಿ, ಸಿ.ಎಂ. ಪಾಟೀಲ, ಎಚ್.ಜಿ. ಹಿರೇಗೌಡ್ರ, ಎಸ್.ವಿ. ಇಟಗಿ, ತಿರಕಣ್ಣ ಬೋಳಣ್ಣವರ, ಎಸ್.ಬಿ. ಹಿರೇಮಠ, ಎಸ್.ಸಿ. ಹಳ್ಳಿ, ಬಸವರಾಜ ನಿಡಗುಂದಿ ಮುಂತಾದವರು ಉಪಸ್ಥಿತರಿರುವರು.
ಗದಗನ ಸಹಕಾರ ಸಂಘಗಳ ಉಪನಿಬಂಧಕರಾದ ಸಾವಿತ್ರಿ ಕಡಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.