ಡಾ. ಮೌಲಾನಾ ಅಬುಲ್ ಕಲಾಂ ಕೊಡುಗೆ ಅಪಾರ
ಗಜೇಂದ್ರಗಡ: ಸ್ವಾತಂತ್ರ್ಯ ನಂತರ ದೇಶದ ಪ್ರಥಮ ಶಿಕ್ಷಣ ಮಂತ್ರಿಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಡಾ. ಮೌಲಾನಾ ಅಬುಲ್ ಕಲಾಂರು ನೀಡಿದ ಕೊಡುಗೆ ಅಪಾರ ಎಂದು ಮುಖ್ಯಗುರುಮಾತೆ ಎಂ.ಟಿ. ಕುಲಕರ್ಣಿ ಹೇಳಿದರು. ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಶಿಕ್ಷಣ ತಜ್ಞ ಡಾ. ಮೌಲಾನಾ ಅಬುಲ್ ಕಲಾಂ ಅಜಾದರ 125ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿರಿಯ ಶಿಕ್ಷಕ ಕೆ.ಬಿ ಜಾಗರಿ, ಐ.ಎಸ್. ಹಾಸೀಮನವರ ವಿಶೇಷ ಉಪನ್ಯಾಸ ನೀಡಿದರು. ಸಿ.ಎಸ್. ಹಿರೇಮಠ, ಎಂ.ಎಂ. ಕರೇಪುಟ್ಟಣ್ಣವರ, ಸಿ.ಎಸ್. ಮೂರಸಿಳ್ಳಿನ, ಎಂ. ಲಕ್ಷ್ಮೀದೇವಿ, ಎಸ್.ಸಿ. ಹೂಗಾರ, ಎಸ್.ಎಸ್.ನರೇಗಲ್, ಡಿ.ಎಸ್. ಭಜಂತ್ರಿ, ಎಂ.ವ್ಹಿ. ನಾಡಗೇರ ಉಪಸ್ಥಿತರಿದ್ದರು.